ಕಾಮಗಾರಿಯಲ್ಲಿ ಗುಣಮಟ್ಟತೆ ಕಾಯ್ದುಕೊಳ್ಳಿ

0101
Published on

ಅಥಣಿ: ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟತೆ ಕಾಯ್ದುಕೊಳ್ಳಬೇಕು. ಸಾರಿಗೆ ಘಟಕಕ್ಕೆ ಆದಾಯದ ಮೂಲವಾಗಿರುವುದರಿಂದ ಮಳಿಗೆ ನಿರ್ಮಾಣದಲ್ಲಿ ಯಾವುದೇ ಲೋಪದೋಷವಾಗದಂತೆ ಎಚ್ಚರ ವಹಿಸಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ಸೂಚಿಸಿದ್ದಾರೆ.

ಅಥಣಿ ಸಾರಿಗೆ ಘಟಕದ ಡಿಪೋ ಆವರಣದ ಮುಂಭಾಗದಲ್ಲಿ ನೂತನವಾಗಿ ಸುಮಾರು 60 ಲಕ್ಷ ರೂ.ವೆಚ್ಚದ ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಹಾಗೂ ಪಟ್ಟಣದ ಸಾರಿಗೆ ವ್ಯವಸ್ಥೆಯ ಸುಧಾರಣೆಗೆ ಹಲವಾರು ಯೋಜನೆ ಹಾಕಿಕೊಳ್ಳಲಾಗಿದ್ದು, ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದು. ಗ್ರಾಮೀಣ ಜನತೆಗೆ ಉತ್ತಮ ಸಾರಿಗೆ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಇಲಾಖೆ ಬದ್ಧವಾಗಿದೆ ಎಂದರು. ಘಟಕ ವ್ಯವಸ್ಥಾಪಕ ಪಿ.ಎಸ್.ಕಿರಣಗಿ, ಶಿವಾನಂದ ದಿವಾನಮಳ, ಶಶಿ ಸಾಳ್ವೆ, ಶಿವರುದ್ರ ಘೂಳಪ್ಪನವರ, ಶ್ರೀಶೈಲ ನಾಯಿಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net