ಸನ್ಮತಿ ಸಹಕಾರದಿಂದ ಗುಣಮಟ್ಟದ ಶಿಕ್ಷಣ

21KAGWAD4
Published on

ಕಾಗವಾಡ: ಸನ್ಮತಿ ಶಿಕ್ಷಣ ಸಹಕಾರ ಸಮಿತಿಯಿಂದ ನಡೆಸಲಾಗುತ್ತಿರುವ ಶಾಲಾ, ಕಾಲೇಜುಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ಒಳ್ಳೇ ಫಲಿತಾಂಶ ನೀಡುತ್ತಿವೆ ಎಂದು ನಿರ್ದೇಶಕ ಡಾ.ಅಶೋಕ ಪಾಟೀಲ ಹೇಳಿದರು.

ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸನ್ಮತಿ ಶಿಕ್ಷಣ ಸಹಕಾರ ಸಮಿತಿ ನಿಯಮಿತದ ೭೩ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು. ನಮ್ಮ ಸಹಕಾರ ಸಮಿತಿಯಿಂದ ತಾಲೂಕಿನ ಶೇಡಬಾಳ, ಉಗಾರ ಬಿ.ಕೆ. ಮತ್ತು ಬೆಳಗಾವಿಯಲ್ಲಿ ಒಟ್ಟು ೧೧ ಶಾಲಾ-ಕಾಲೇಜುಗಳಿದ್ದು, ಎಲ್ಲರ ಸಹಕಾರದೊಂದಿಗೆ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಸಹಕಾರ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಸಮಿತಿ ಕಾಲೇಜಿನ ಉಪನ್ಯಾಸಕ ಭರತ ಅಲಸಂದಿ, ಶೇಡಬಾಳ ಸನ್ಮತಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಎಂ.ಎನ್. ಕಾಳೇನಟ್ಟಿ, ಶೇಡಬಾಳ ಸಮಿತಿ ಕಾಲೇಜಿನ ಪ್ರಾಂಶುಪಾಲ ಬಾಹುಬಲಿ ಬಣಜವಾಡ, ಉಗಾರ ಬಿಕೆಯ ಪದ್ಮಾವತಿ ಶಾಲೆಯ ಮುಖ್ಯಶಿಕ್ಷಕ ಎಸ್.ಪಿ. ಕಾಂಬಳೆ, ಉಪಾಧ್ಯಕ್ಷ ಅಶೋಕ ನಾಂದ್ರೆ, ಅಶ್ವತ್ಥಕುಮಾರ ಪಾಟೀಲ, ಡಾ.ಅಶೋಕ ಪಾಟೀಲ, ಸನ್ಮತಿ ಪಾಟೀಲ, ಅಕ್ಕಾತಾಯಿ ಮುಜಾವರ, ಸುನೀತಾ ಮಾಕನ್ನವರ, ಆಡಳಿತ ಮಂಡಳಿ ಚೇರ್ಮನ್ ವಿನೋದ ಪಾಟೀಲ, ಶಾಂತಿನಾಥ ಪಾಟೀಲ, ಎ.ಬಿ.ಪಾಟೀಲ, ರವಿ ದಂಡಗಿ, ಕುಮಾರ ಮಾಲಗಾಂವೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net