ಗುಣಮಟ್ಟದ ಶಿಕ್ಷಣ ನೀಡಬೇಕು

27Rayabag3
Published on

ರಾಯಬಾಗ: ಶಿಕ್ಷಕರು ಜೀವನೋತ್ಸಾಹ ತುಂಬಿ, ಭಯಮುಕ್ತ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ನಿವೃತ್ತ ಶಿಕ್ಷಕ ಸುಭಾಷ ಮುನ್ನೊಳ್ಳಿ ಹೇಳಿದರು.

ತಾಲೂಕಿನ ನಸಲಾಪುರ ಗ್ರಾಮದ ಎಸ್.ಜಿ.ಕಾಂತೆ ಪ್ರೌಢಶಾಲೆ ಸಭಾಭವನದಲ್ಲಿ ಬಾಲಾಚಾರ್ಯ 108 ಡಾ.ಸಿದ್ಧಸೇನ ಮುನಿ ಮಹಾರಾಜರ ಪಾವನ ಚಾತುರ್ಮಾಸದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಜೈನ ಶಿಕ್ಷಕರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಶಿಕ್ಷಕರಿಗೆ ಶಿಸ್ತು ಅಗತ್ಯವಾಗಿದ್ದು, ಉತ್ತಮ ವ್ಯಕ್ತಿತ್ವ ಹೊಂದುವ ಮೂಲಕ ಮಕ್ಕಳಿಗೆ ಮಾದರಿಯಾಗಬೇಕು ಎಂದರು.

ಡಾ.ಸಿದ್ದಸೇನ ಮುನಿಮಹಾರಾಜರು ಮಾತನಾಡಿ, ಜೀವನದಲ್ಲಿ ಗುರು ಇಲ್ಲದಿದ್ದರೆ ಜೀವನ ಪ್ರಾರಂಭವಾಗುವುದಿಲ್ಲ. ಇಂತಹ ಶಿಕ್ಷಕರ ಸಮಾವೇಶ ನಡೆಯಬೇಕು ಎಂದರು.

ಡಾ.ಎನ್.ಎ.ಮಗದುಮ್ಮ, ಬಾವುಸಾಹೇಬ ಪಾಟೀಲ, ಭರತೇಶ ಬನವಣೆ, ಟಿ.ಆರ್.ಜೋಡಟ್ಟಿ, ಜೆ.ಪಿ.ತಂಗಡಿ, ರಾಜಗೌಡ ಪಾಟೀಲ, ಸಂಜಯ ಪಾಟೀಲ, ಚಂದ್ರಕಾಂತ ಕಾಂತೆ, ರಾವಸಾಹೇಬ ಪಾಟೀಲ, ಭರತೇಶ ಅಲಗೂರ, ಶ್ರೀಪಾದ ದತ್ತವಾಡೆ, ವಸಂತ ಸಮಾಜೆ, ಭೀಮಗೌಡ ಕರನವಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net