

ಚಿತ್ರದುರ್ಗ: ಬಿ.ಇಡಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕಿದೆ ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ್ ಶಿಕ್ಷಣ ಮಹಾವಿದ್ಯಾಲಯಗಳ ಬೋಧಕ ವರ್ಗಕ್ಕೆ ಸಲಹೆ ನೀಡಿದರು.
ನಗರದ ಎಸ್‌ಆರ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ‘ಪ್ರಶಿಕ್ಷಕರ ಶಿಕ್ಷಣ- ದಿ ಬಿಕಾನ್ ಲೈಟ್’ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಅಂಥ ಶಿಕ್ಷಕರನ್ನು ರೂಪಿಸುವ ಶಿಕ್ಷಣ ಮಹಾವಿದ್ಯಾಲಯಗಳ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ರಾಂತ ಪ್ರಾಚಾರ್ಯ ಡಾ. ಎಚ್.ಎಸ್. ಗಣೇಶ್‌ಭಟ್ ಭಾರತೀಯ ಶೈಕ್ಷಣಿಕ ಪರಂಪರೆ-ಪ್ರಸ್ತುತ ಶಿಕ್ಷಣದ ದಿಕ್ಕನ್ನು ಹೇಗೆ ಮುನ್ನೆಡಸಬೇಕೆಂಬ ಕುರಿತು ಮಾತನಾಡಿದರು. ದಾವಣಗೆರೆ ಬಿಇಎ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಸಿ. ಕೌಶಿಕ್, ವಿವಿ ಪ್ರಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಎಸ್. ಚನ್ನಬಸಪ್ಪ, ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆ ಬಗ್ಗೆ ವಿಷಯ ಮಂಡಿಸಿದರು.
ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಅಧ್ಯಕ್ಷತೆವಹಿಸಿದ್ದರು. ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್. ಅಮೋಘ್, ಆಡಳಿತಾಧಿಕಾರಿ ಡಾ.ಟಿ.ಎಸ್. ರವಿ,ದಾವಣಗೆರೆ ವಿವಿ ಕುಲಸಚಿವ ಪ್ರೊ. ಎಸ್.ಬಿ. ಘಂಟಿ, ಪ್ರಶಿಕ್ಷಕರ ಸಂಘದ ಅಧ್ಯಕ್ಷ ಡಾ.ಕೆ ಪಿ. ನಾಗಭೂಷಣಶೆಟ್ಟಿ, ಡಾ.ಕೆ. ವೆಂಕಟೇಶ್, ಪ್ರೊ.ಎ. ಹನುಮಕ್ಕ, ಎಂ.ಆರ್. ಮಂಜುನಾಥ್, ಜಿ. ಕೊಟ್ರೇಶ್, ಡಾ ಎ.ಜೆ. ನೀತಾ, ಡಾ.ಬಿ.ಆರ್. ಗುರುದೇವ, ಡಾ.ಎನ್.ಎಂ. ರಾಜೇಶ್, ಡಾ.ಎ.ಜಿ. ಬಸವರಾಜಪ್ಪ, ಡಾ.ಡಿ. ಮಂಜುಳಾ, ಡಾ.ಕೆ.ಟಿ. ನಾಗರಾಜನಾಯ್ಕ, ಎಂ. ಬಸವರಾಜ್, ಡಾ.ಆರ್. ಸಂತೋಷ್‌ಕುಮಾರ್ ಇದ್ದರು.