ವಿದ್ಯಾರ್ಥಿಗಳ ಭವಿಷ್ಯಕ್ಕೆ ಗುಣಮಟ್ಟದ ಶಿಕ್ಷಣ ಅವಶ್ಯ

Quality education is essential for the future of students.
ಮುಧೋಳದ ಶ್ರೀ ಸಾಯಿನಿಕೇತನ ಸಮೂಹ ಸಂಸ್ಥೆಗಳ 2024-25ನೇ ಸಾಲಿನ ವಾರ್ಷಿಕೋತ್ಸವ ಶ್ರೀ ಸಾಯಿ ಸಂಭ್ರಮ-2025 ಕಾರ್ಯಕ್ರಮದಲ್ಲಿ ಸಂಸ್ಥಾಪಕ ಕಾರ್ಯಾಧ್ಯಕ್ಷ ರಾಜೇಶ ವಾಲಿ ಮಾತನಾಡಿದರು. ಎಸ್.ಪಿ.ಅಮರನಾಥರೆಡ್ಡಿ, ಸಿಪಿಐ ಮಹಾದೇವ ಶಿರಹಟ್ಟಿ, ವಿದ್ಯಾ ವಾಲಿ ಇದ್ದಾರೆ.
Published on

ಮುಧೋಳ: ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅವಶ್ಯವಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಎಸ್‌ಪಿ ಅಮರನಾಥರೆಡ್ಡಿ ಹೇಳಿದರು.

ನಗರದ ಶಿರಡಿ ಸಾಯಿ ಶಿಕ್ಷಣ ಸಂಸ್ಥೆಯ ಸಾಯಿನಿಕೇತನ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಸಾಯಿ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳಿಗೆ ಅಭ್ಯಾಸ ಮಾಡಿಸುವ ನಿಟ್ಟಿನಲ್ಲಿ ಪಾಲಕರು ದಿನದಲ್ಲಿ ಒಂದು ಗಂಟೆಯಾದರೂ ಮೀಸಲಿಡಬೇಕು. ಶಿಕ್ಷಕರು ಮಕ್ಕಳ ಮನಸ್ಸು ಅರ್ಥ ಮಾಡಿಕೊಂಡು ಶಿಕ್ಷಣ ನೀಡಬೇಕು ಎಂದರು.

ಸಂಸ್ಥೆ ಕಾರ್ಯದರ್ಶಿ ರಾಜೇಶ ವಾಲಿ ಮಾತನಾಡಿ, ಶಿರಡಿ ಶಿಕ್ಷಣ ಸಂಸ್ಥೆ ಆರಂಭದಿಂದಲೂ ಗುಣಾತ್ಮಕ ಶಿಕ್ಷಣ ನೀಡುವುದರ ಮೂಲಕ ನಾಲ್ಕು ಶಾಖೆಗಳನ್ನು ಆರಂಭಿಸಿದೆ. ಸಹಸ್ರಾರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿ ಬದುಕು ರೂಪಿಸಿದೆ. ಸಂಸ್ಕಾರ, ಶಿಸ್ತು, ಸಮಯ ಪ್ರಜ್ಞೆ ಬೆಳೆಸುವ ಮೂಲಕ ಶಿಕ್ಷಣ ಒದಗಿಸಲಾಗುತ್ತಿದೆ ಎಂದರು.

ಜಮಖಂಡಿ ಡಿವೈಎಸ್‌ಪಿ ಶಾಂತವೀರ ಮಾತನಾಡಿ, ದೇವರಿಗಿಂತ ಗುರುವಿಗೆ ವಿಶಿಷ್ಟ ಸ್ಥಾನಮಾನವಿದೆ. ದೇವರು ಬರೆದ ಮಗುವಿನ ಹಣೆಬರಹವನ್ನು ಬದಲಾವಣೆ ಮಾಡುವ ಶಕ್ತಿ ಶಿಕ್ಷಕರಲ್ಲಿದೆ ಎಂದರು.

ಸಿಪಿಐ ಮಹಾದೇವ ಶಿರಹಟ್ಟಿ ಶ್ರೀ ಶಿರಡಿ ಸಾಯಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷೆ ವಿದ್ಯಾ ವಾಲಿ, ಮಕಾಜಿ ಇಂಗಳೆ, ಮುಖ್ಯಶಿಕ್ಷಕ ವೆಂಕಟೇಶ ಪಾಟೀಲ, ದಿನೇಶ ಮೌಲ್ಯ ಮತ್ತಿತರರಿದ್ದರು.

ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ

ಕಾರ್ಯಕ್ರಮವನ್ನು ಮಂತ್ರಿ, ಅಧಿಕಾರಿ ಅಥವಾ ಗಣ್ಯರಿಂದ ಉದ್ಘಾಟನೆ ಮಾಡಿಸದೆ ಸಂಸ್ಥೆಯಲ್ಲಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಲಾ ವಾಹನ ಚಾಲಕರು, ಸಿಪಾಯಿ ಹಾಗೂ ಆಯಾಗಳಿಂದ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net