

ವಿಜಯವಾಣಿ ಸುದ್ದಿಜಾಲ ಅವಾಸೆಬೈಲು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶವಿದೆ. ಮಕ್ಕಳ ಪಾಲಕರು ಇಂಗ್ಲಿಷ್ ವಾಧ್ಯಮದ ಬಗ್ಗೆ ಆಸಕ್ತಿ ಹೊಂದುತ್ತಿರುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿಯೂ ಇಂಗ್ಲಿಷ್ ವಾಧ್ಯಮ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಕುಂದಾಪುರ ಶಾಸಕ ಎ.ಕಿರಣ್‌ಕುವಾರ್ ಕೊಡ್ಗಿ ಹೇಳಿದರು. ಅವಾಸೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಎಲ್‌ಕೆಜಿ ಹಾಗೂ ಯುಕೆಜಿ ನೂತನ ತರಗತಿಗಳನ್ನು ಮಂಗಳವಾರ ಉದ್ಘಾಟಿಸಿ ವಾತನಾಡಿದರು. ಕೋಟೇಶ್ವರ ಗೀತಾ ಎಚ್.ಎಸ್.ಎನ್.ಪೌಂಡೇಶನ್ ಟ್ರಸ್ಟ್ ವತಿಯಿಂದ ಶಾಲೆ ಗೌರವ ಶಿಕ್ಷಕಿಯರಿಗೆ ಗೌರವಧನ, ಶಾಲಾ ಸಮವಸ್ತ್ರ್ರ, ಗುರುತಿನ ಚೀಟಿ, ಶುದ್ಧ ಕುಡಿಯುವ ನೀರಿನ ಯಂತ್ರ, ಊಟದ ಸ್ಟೀಲ್ ತಟ್ಟೆಗಳು, ನೋಟ್ ಪುಸ್ತಕಗಳು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಲ್ಯಾಪ್‌ಟ್ಯಾಪ್, ಸ್ಥಳೀಯರಿಗೆ ಸೋಲಾರ್ ವಿದ್ಯುತ್, ವೈದ್ಯಕೀಯ ನೆರವು, ಮನೆ ನಿರ್ವಾಣಕ್ಕೆ ಸಹಾಯಧನ ಹಾಗೂ ಇನ್ನಿತರ ಕೊಡುಗೆ ಹಸ್ತಾಂತರಿಸಲಾಯಿತು. ಉಡುಪಿ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಡಾ.ಅಶೋಕ ಕಾಮತ್, ಕೋಟೇಶ್ವರ ಗೀತಾ ಎಚ್.ಎಸ್.ಎನ್.ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಶಂಕರ ಐತಾಳ್ ಅವಾಸೆಬೈಲು, ಕೋಶಾಧಿಕಾರಿ ಶ್ರೀರಾಮ ಅಡಿಗ ಬ್ರಹ್ಮಾವರ, ಟ್ರಸ್ಟಿ ಮುಸ್ತಾಕ್ ಅಹಮ್ಮದ್ ಬೆಳ್ವೆ, ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರ ಶೆಟ್ಟಿ ಕಿಬ್ಬ್ತ್ಯೈಲು, ಅವಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂ ಅಧ್ಯಕ್ಷ ಸದಾನಂದ ಶೆಟ್ಟಿ, ಅವಾಸೆಬೈಲು ವನ್ಯಜೀವಿ ವಲಯದ ವಲಯಾರಣ್ಯಾಧಿಕಾರಿ ರೋಪೇಶ್, ಅವಾಸೆಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ ಕುಲಾಲ, ಸದಸ್ಯೆ ಸುಮತಿ, ಕೃಷ್ಣ ಪೂಜಾರಿ ಕ್ಯೋಲಾಡಿ, ಹಾಲಾಡಿ ವೃತ್ತ ಶಿಕ್ಷಣ ಸಂಯೋಜಕ ಶೇಖರ್ ಯು, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಆರ್.ನವೀನ್‌ಚಂದ್ರ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಸುಕೇಶ್ ಭಂಡಾರಿ, ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತಿದ್ದರು. ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಸ್ವಾಗತಿಸಿ, ಶಿಕ್ಷಕಿ ಸವಿತಾ ವಂದಿಸಿದರು. ಶಿಕ್ಷಕಿ ಗೀತಾ ಹೆಗ್ಡೆ ನಿರೂಪಿಸಿದರು.
ಗ್ರಾಮೀಣ ಭಾಗದ ಈ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪ್ರವಾಣ ಪ್ರತಿ ವರ್ಷ ಗಣನೀಯ ಪ್ರವಾಣದಲ್ಲಿ ಏರಿಕೆಯಾಗುತ್ತಿರುವುದು ಪ್ರಶಂಸನೀಯ. ಶಾಲೆಯ ಬಗ್ಗೆ ಪಾಲಕರಿಗೆ ಹೆಚ್ಚಿನ ವಿಶ್ವಾಸ ಮೂಡಿಸಿದೆ. ಶಾಲೆಯ ಬೆಳವಣಿಗೆಯಲ್ಲಿ ಶಿಕ್ಷಕ ವೃಂದವರ ಶ್ರಮ, ದಾನಿಗಳು, ಎಸ್‌ಡಿಎಂಸಿ, ಹಳೇ ವಿದ್ಯಾರ್ಥಿಗಳು, ಕೋಟೇಶ್ವರ ಗೀತಾ ಎಚ್.ಎಸ್.ಎನ್.ಫೌಂಡೇಶನ್ ಕೊಡುಗೆ ಮಹತ್ವ ಹೊಂದಿದೆ. -ಡಾ.ಅಶೋಕ ಕಾಮತ್, ವಿದ್ಯಾಂಗ ಉಪ ನಿರ್ದೇಶಕರು,ಉಡುಪಿ. https://www.vijayavani.net/life-lessons-are-not-learned-in-the-classroom https://www.vijayavani.net/honors-to-meritorious-students-of-amruta-bharati