

ಮುಂಡರಗಿ: ಶ್ರೀ ರತ್ನಾಕರ ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣ ನಗರಾಭಿವೃದ್ಧಿ ಶಿಕ್ಷಣ ಸಂಸ್ಥೆ ಮಕ್ತುಂಪುರ, ಶ್ರೀ ವಾಲ್ಮೀಕಿ ಸಾಂಸ್ಕೃತಿಕ ಕಲಾ ಹಾಗೂ ಕ್ರೀಡಾ ಯುವಕ ಸಂಘ, ಕಲ್ಪವೃಕ್ಷ ವಿವಿಧೋದ್ದೇಶಗಳ ಸೇವಾ ಫೌಂಡೇಷನ್ ಟ್ರಸ್ಟ್ ಸಹಯೋಗದೊಂದಿಗೆ ಹನುಮಪ್ಪ ವಾಲಿಕಾರ, ಶರಣಪ್ಪ ಹೊಸಮನಿ, ಶಿವು ವಾಲಿಕಾರ ನೇತೃತ್ವದಲ್ಲಿ ಇತ್ತೀಚೆಗೆ ತಾಲೂಕಿನ ಮಕ್ತುಂಪುರ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಿಹಿ ಊಟ ಹಾಗೂ ನೋಟ್‌ಬುಕ್, ಪೆನ್ನು ವಿತರಿಸಲಾಯಿತು.
ಕಲ್ಪವೃಕ್ಷ ವಿವಿಧೋದ್ದೇಶಗಳ ಸೇವಾ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ದೇವು ಹಡಪದ ಮಾತನಾಡಿ, ಇತ್ತೀಚೆಗೆ ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಸರ್ಕಾರ ವಿಭಿನ್ನ ರೀತಿಯಲ್ಲಿ ಕಲಿಕಾ ಕಾರ್ಯಕ್ರಮ ಹಮ್ಮಿಕೊಂಡು ಶಿಕ್ಷಣದ ಕ್ರಾಂತಿ ಮಾಡುತ್ತಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚು ತೊಡಗಿಕೊಂಡು ಉನ್ನತ ಸಾಧನೆ ಮಾಡುವ ಗುರಿ ಹೊಂದಬೇಕು ಎಂದರು.
ಶಾಲಾ ಮುಖ್ಯಶಿಕ್ಷಕ ವಿ.ಆರ್. ಕುರಡಗಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಅಕ್ಕಮಹಾದೇವಿ ಕೊಟ್ಟೂರುಶೆಟ್ಟರ್ ಮಾತನಾಡಿದರು. ಸಂಸ್ಥೆ ವತಿಯಿಂದ ಹಲವಾರು ಶಿಕ್ಷಣ ಪ್ರೇಮಿಗಳನ್ನು ಸನ್ಮಾನಿಸಲಾಯಿತು.
ಗ್ರಾಪಂ ಸದಸ್ಯೆ ಲಲಿತಮ್ಮ ಹೊಸಮನಿ, ನೀಲಪ್ಪ ಡೊಣಿ, ಮುದಿಯಪ್ಪ ಲಕ್ಕುಂಡಿ, ಪರಶುರಾಮ ಡಂಬಳ, ಅಂದಪ್ಪ ವಾಲಿಕಾರ ಖಾಸಿಮಸಾಬ್ ಮಕಾಂದಾರ, ಪರಶುರಾಮ ರಾಮೇನಹಳ್ಳಿ, ರಮೇಶ ವಾಲಿಕಾರ, ರಮೇಶ ಹೊಸಮನಿ, ರಾಜೇಸಾಬ್ ಅತ್ತಾರ ಮತ್ತಿತರರು ಉಪಸ್ಥಿತರರು ಇದ್ದರು. ರತ್ನಾಕರ ಸಾಂಸ್ಕೃತಿಕ ಕಲಾ ಸಂಸ್ಥೆ ಅಧ್ಯಕ್ಷ ಶಿವು ವಾಲಿಕಾರ ಕಾರ್ಯಕ್ರಮ ನಿರೂಪಿಸಿದರು.