ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ

Quality education in government school
ಹುನಗುಂದ ಪಟ್ಟಣದ ಸರ್ಕಾರಿ ಕೇಂದ್ರ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಿಇಒ ಜಾಸ್ಮೀನ ಕಿಲ್ಲೇದಾರ ಉದ್ಘಾಟಿಸಿದರು. ಸದಾಶಿವ ಗುಡುಗುಂಟಿ, ಕೆ.ವಿ. ಮಡಿವಾಳರ, ಆನಂದ ಗದ್ದನಕೇರಿ, ಮಹಾದೇವಪ್ಪ ಕಲಾಲ, ರಾಜವ್ವ ಬಾದಾಮಿ ಮತ್ತಿತರರಿದ್ದಾರೆ.
Published on

ಹುನಗುಂದ: ಸರ್ಕಾರಿ ಕೇಂದ್ರ ಶಾಲೆಯ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಮೂಲಕ ಶಾಲೆಯ ವೈಭವ ಮುಂದುವರಿಸಲು ಕೈಜೋಡಿಸಬೇಕು. ನಾವು ಶಿಕ್ಷಣ ಪಡೆದ ಶಾಲೆಯ ಬಗ್ಗೆ ನಮಗೆ ಅಭಿಮಾನವಿರಬೇಕು ಎಂದು ಬಿಇಒ ಜಾಸ್ಮೀನ ಕಿಲ್ಲೇದಾರ ಹೇಳಿದರು.

ಪಟ್ಟಣದ ಸರ್ಕಾರಿ ಕೇಂದ್ರ ಶಾಲೆ ಮತ್ತು ಸಮಾಜ ಕೇಂದ್ರ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಸದಾಶಿವ ಗುಡುಗುಂಟಿ ಮಾತನಾಡಿ, ಸರ್ಕಾರಿ ಶಾಲೆಗಳು ಮಕ್ಕಳ ಮೌಲ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ಮಾತ್ರ ಮಗು ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದರು.

ಶಿಕ್ಷಕ ಆನಂದ ಗದ್ದನಕೇರಿ ಮಾತನಾಡಿ, ಶತಮಾನ ಕಂಡ ಶಾಲೆಯ ಬಗ್ಗೆ ಶಾಸಕರು ಅಪಾರ ಕಾಳಜಿ ಹೊಂದಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ನನ್ನ ಶಾಲೆ ನನ್ನ ಕೊಡುಗೆ ನಮ್ಮಿಂದಲೇ ಆರಂಭವಾಗಲಿ ಎಂದರು.

ಮುಖ್ಯ ಶಿಕ್ಷಕ ಕೆ.ವಿ. ಮಡಿವಾಳರ ಮಾತನಾಡಿ, ಶಾಸಕ ವಿಜಯಾನಂದ ಕಾಶಪ್ಪನವರ ನಮ್ಮ ಶಾಲೆಗೆ ಡಿಎಂಎಫ್ ಅನುದಾನದಡಿ 7.5 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ನೀಡಿದ್ದಾರೆ. ಸದ್ಯದಲ್ಲೆ ಸುಸಜ್ಜಿತವಾದ 6 ನೂತನ ಕಟ್ಟಡ ನಿರ್ಮಿಸುವ ಗುರಿ ಹೊಂದಿದ್ದಾರೆ ಎಂದರು.

ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದಿಂದ ದಾನಿಗಳು ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು. ಮಹಾದೇವಪ್ಪ ಕಲಾಲ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ರಾಜವ್ವ ಬಾದಾಮಿ, ಮುಖಂಡರಾದ ಮಹಾಂತೇಶ ಅವಾರಿ, ರವಿ ಹುಚನೂರ, ಮಲ್ಲು ವೀರಾಪುರ, ಸಂಗಮೇಶ ಪಾಟೀಲ, ಸಂಗಮೇಶ ಹೊದ್ಲೂರ, ಸಂಗಪ್ಪ ಹೊನ್ನಳ್ಳಿ, ಮಹಾಂತೇಶ ಶೆಟ್ಟರ್, ಬಂದೇನವಾಜ್ ಬೀಳಗಿ, ಸಿಆರ್‌ಪಿ ಬಸವರಾಜ ಮುಂಡೆವಾಡಿ, ಶಿಕ್ಷಕ ಸಿದ್ದು ಶೀಲವಂತರ, ಡಿ.ಎಂ. ಬಾಗವಾನ, ಎಂ.ಐ. ಕರಡಿ ಉಪಸ್ಥಿತರಿದ್ದರು. ಶಿಕ್ಷಕಿ ಎಸ್.ಎಸ್. ಗಂಗಾಧರಮಠ ನಿರೂಪಿಸಿದರು, ಚನ್ನಮ್ಮ ಕುಟುಕಮರಿ ಸ್ವಾಗತಿಸಿದರು ಹಾಗೂ ಆರ್.ಐ. ಗಾಡಿವಾನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net