ಗುಣಮಟ್ಟದ ಶಿಕ್ಷಣದಿಂದ ಸದೃಢ ಸಮಾಜ ನಿಮಾರ್ಣ ಸಾಧ್ಯ

12 MBL 1
Published on

ಮುಳಬಾಗಿಲು: ಸಮಾಜದಲ್ಲಿ ಮನುಷ್ಯ ಪರಿಪೂರ್ಣ ವ್ಯಕ್ತಿಯಾಗಬೇಕಾದರೆ ಗುಣಮಟ್ಟದ ಶಿಕ್ಷಣ ಅವಶ್ಯ, ಇದರಿಂದ ಸದೃಢ ಸಮಾಜ ನಿಮಾರ್ಣ ಸಾಧ್ಯ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್​.ಅರವಿಂದ್​ ಹೇಳಿದರು.

ನಗರದ ಗುರುಭವನದಲ್ಲಿ 2024-&25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತಿ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ನೀಡಲು ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳೊಂದಿಗೆ ಶಿಕ್ಷಣ ಪಡೆಯಬೇಕು ಆಗಲೇ ದೇಶಕ್ಕೆ ಅತ್ಯುನ್ನತ ಸೇವೆ ಸಲ್ಲಿಸಲು ಸಾಧ್ಯ ಎಂದರು.

ವಿದ್ಯಾಭ್ಯಾಸ ನೀಡಿದ ಗುರುಗಳನ್ನು ಮತ್ತು ಪಾಲಕರನ್ನು ಗೌರವದಿಂದ ಕಾಣಬೇಕು. ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಬೇಕಾದರೆ ಛಲ ಮುಖ್ಯ, ಗುರುಗಳು, ತಂದೆ, ತಾಯಿ ಮತ್ತು ಹಿರಿಯರ ಮಾತುಗಳನ್ನು ಗೌರಿಸಬೇಕು ಎಂದರು.

ಪ್ರಾಧ್ಯಾಪಕ ಶಂಕರಪ್ಪ ಮಾತನಾಡಿ, ಮನುಷ್ಯ ಬದುಕಲು ಹಲವು ಕನಸುಗಳನ್ನು ಕಂಡಿರುತ್ತಾನೆ, ಅದರಲ್ಲಿ ಪ್ರಮುಖ ಹಣ ಸಂಪಾದನೆ ಪ್ರಮುಖ ಗುರಿಯಾಗಿರುತ್ತೆ. ಅದನ್ನು ಪಡೆಯಲು ವಿದ್ಯಾರ್ಥಿಗಳು ಕೌಶಲ ಭರಿತ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಚ್​.ವೆಂಕಟಗಿರಿಯಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನೌಕರರಿಗೆ ಒತ್ತಡಗಳು ಹೆಚ್ಚಾಗುತ್ತಿವೆ ಅದರಲ್ಲೂ ಶಿಕ್ಷಕರಿಗೆ ಇಲಾಖೆ ಬಹಳಷ್ಟು ಕೆಲಸಗಳನ್ನು ನಿರ್ವಹಿಸಲು ತಿಳಿಸುತ್ತಿದೆ. ಆದರೂ ನಾವೆಲ್ಲವೂ ಇಲಾಖೆ ತಿಳಿಸಿರುವ ಕೆಲಸಗಳನ್ನು ನಿರ್ವಹಿಸಿ ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಾದ ನಿಮ್ಮ ಗುರಿ ಒಂದೇ ಆಗಿರಲಿ ಮುಂದೆ ಉತ್ತಮ ಪ್ರಜೆಗಳಾಗಿ ಸಮಾಜ ಸೇವಕರಾಗಿ ಎಂದರು.

ತಾಲೂಕು ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಬೈರೇಗೌಡ, ಪ್ರದಿಪ್​, ಮುನಿರಾಜು, ಪದಾಧಿಕಾರಿಗಳಾದ ಮಂಜುನಾಥ್​, ವಿಜಯ್​ ಕುಮಾರ್​, ಜಗದೀಶ್​, ಚಿತ್ರಾ, ನಾಗವೇಣಿ, ಹರೀಶ್​, ರಾಮಕೃಷ್ಣ, ಸರಿತಾ, ಶಿವಶಂಕರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಓಬಳರೆಡ್ಡಿ, ತಾಲೂಕು ಉಪಾಧ್ಯಕ್ಷ ಎಚ್​. ಭಾಸ್ಕರ್​ ರೆಡ್ಡಿ, ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಚನ್ನಪ್ಪ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀರಾಮಯ್ಯ, ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ಪೈಝುಲ್ಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net