ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯ

7Alagavadi1
Published on

ಅಳಗವಾಡಿ: ದುಬಾರಿ ಖಾಸಗಿ ಶಾಲೆಗಳಿಗಿಂತ ಗುಣಮಟ್ಟದ ಶಿಕ್ಷಣದ ಜತೆಗೆ ನೈತಿಕ ಮೌಲ್ಯ ಕಲಿಸುವಲ್ಲಿ ಸರ್ಕಾರಿ ಶಾಲೆಗಳು ಮೊದಲ ಸ್ಥಾನದಲ್ಲಿವೆ ಎಂದು ಜಕನೂರಿನ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಡಾ. ಮಾಧುಲಿಂಗ ಸ್ವಾಮೀಜಿ ಹೇಳಿದರು.

ಗ್ರಾಮದ ಸರ್ಕಾರಿ ಪ್ರಾಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣ ಸಂಯೋಜಕ ಎನ್.ಎಸ್. ಪೂಜೇರಿ ಮಾತನಾಡಿ, ವಿದ್ಯಾರ್ಥಿಗಳು ನಿರ್ಭಯದಿಂದ ಪರೀಕ್ಷೆ ಬರೆದರೆ ಹೆಚ್ಚಿನ ಅಂಕ ಪಡೆಯಬಹುದು ಎಂದರು.

ಮುಖ್ಯಶಿಕ್ಷಕಿ ಸುನೀತಾ ಅಳಗೊಂಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಕುಮಾರ ಬನಶಂಕರಿ, ಕುಡಚಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಹಾಲ್ಗೂಣಿ, ಜಿಪಂ ಮಾಜಿ ಸದಸ್ಯ ಮಹಾದೇವ ಶಿರಗೂರೆ, ಕುರಬ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಹಾಡಕಾರ, ತಾಪಂ ಮಾಜಿ ಸದಸ್ಯ ಶ್ಯಾಮರಾವ್ ಬನಶಂಕರಿ, ಎಸ್‌ಡಿಎಂಸಿ ಉಪಾಧ್ಯಕ್ಷ ಚಿದಾನಂದ ಪಡಚೆ, ರಾಮಣ್ಣ ಶಿರಗೂರೆ, ಕರೆಪ್ಪ ಲಠ್ಠೆ, ರವಿ ಶಿರಗೂರೆ, ಗೋಪಾಲ ಹಂಜೆ, ಡಿ.ಎಸ್. ಶೆಟ್ಟಿಗೌಡರ, ಎ.ಬಿ. ತೌಂಶಿ, ಮಹಾಂತೇಶ ಕಟ್ಟಿಮನಿ, ಎನ್.ಎಸ್. ಮುಜಾವರ, ಎಂ.ಟಿ. ಪಾಟೀಲ, ದಯಾನಂದ ಯರಕದ, ಪ್ರಕಾಶ ಹೊಲ್ಲೋಳಿ, ವಿ.ಎಸ್. ಸಮಾಜ, ಎಸ್.ಎಚ್. ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net