ಇಗ್ನೋದಲ್ಲಿದೆ ಗುಣಮಟ್ಟದ ಶಿಕ್ಷಣ

11 vikram 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳಿಗೆ ಇಗ್ನೋ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತದೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ಇಗ್ನೋ ದೂರ ಶಿಕ್ಷಣ ಕೇಂದ್ರದಲ್ಲಿ ಒಂದಾದ ಜೆಎಸ್‌ಎಸ್ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಜುಲೈ ತಿಂಗಳ ಕೊರ್ಸ್‌ಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ದೀಕ್ಷಾಬೋಧನಾ ವಿಧಿ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೆಎಸ್‌ಎಸ್ ಕಾಲೇಜು ಹಾಗೂ ಈ ಶಿಕ್ಷಣ ಸಂಸ್ಥೆಯಲ್ಲಿ ಸೇರ್ಪಡೆಯಾದ ಇಗ್ನೋ ದೂರ ಶಿಕ್ಷಣ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸೌಲಭ್ಯಗಳಾದ ಸ್ಪರ್ಧಾತ್ಮಕ ಗ್ರಂಥಾಲಯದ ಬಳಕೆಗೆ ಅವಕಾಶವಿದೆ. ಇಗ್ನೋ ಕೊರ್ಸ್ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗುವುದು ಎಂದರು.
ಇಗ್ನೊ ದೂರ ಶಿಕ್ಷಣದ ಪ್ರಾದೇಶಿಕ ನಿರ್ದೇಶಕ ಬಿ.ಎಸ್. ದೇವೇಂದ್ರ ಮಾತನಾಡಿ, ಇಗ್ನೋ ಬೃಹತ್ ವಿಶ್ವವಿದ್ಯಾಲಯ. ನ್ಯಾಕ್‌ನಿಂದ ಂ++ ಪಡೆದಿದೆ. ಇಲ್ಲಿ ಕಲಿಕೆ ಪಡೆಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ಇಗ್ನೋ ವಿದ್ಯಾರ್ಥಿಗಳು ಪಠ್ಯಕ್ರಮಕ್ಕೆ ಸಂಬಂಧಪಟ್ಟ ಪಠ್ಯಗಳನ್ನು ಪಡೆಯುವುದು ಮಾತ್ರವಲ್ಲದೆ, ಇ ಜ್ಞಾನಕೋಶದಲ್ಲಿ ಆನ್‌ಲೈನ್ ಮೂಲಕ ವಿಷಯದ ಕುರಿತ ಜ್ಞಾನ ದೊರೆಯಿತ್ತದೆ ಎಂದರು.
ಡಾ.ರಾಜೇಶ ಚಿಟಗುಪ್ಪಿ, ಮಹಿಮಾ ಭಟ್, ಇತರರು ಇದ್ದರು.ಡಾ. ಸೂರಜ ಜೈನ್ ಸ್ವಾಗತಿಸಿದರು. ಡಾ. ಮಂಜುನಾಥ ಪೂಜಾರ ವಂದಿಸಿದರು. ವಿವೇಕ ಲಕ್ಷ್ಮೇಶ್ವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net