

ಅಳವಂಡಿ: ದೇಶವನ್ನು ಅಭಿವೃದ್ಧಿಪಡಿಸಲು ಉತ್ತಮ ಶಿಕ್ಷಣ ಪಡೆದ ನಾಗರಿಕರಿಂದ ಮಾತ್ರ ಸಾಧ್ಯವಾಗಲಿದ್ದು, ಪಾಲಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ರವಿಕುಮಾರ ಶಿವನಗೌಡ್ರ ಹೇಳಿದರು.
ಸಮೀಪದ ಗುಡ್ಲಾನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಶಿಕ್ಷಣ ಮತ್ತು ಸಾಕ್ಷರತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲಿಕಾ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಗನವಾಡಿ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಆಂದೋಲನ ಕಾರ್ಯಕ್ರಮವನ್ನು ಚಾಲನೆ ನೀಡಿ ಭಾನುವಾರ ಮಾತನಾಡಿದರು.
ಶಿಕ್ಷಣ ಎಂಬುದು ಸಂವಿಧಾನದ ಮೂಲಭೂತ ಹಕ್ಕಾಗಿದ್ದು, ಮಕ್ಕಳಿಗೆ ಜ್ಞಾನದ ಜತೆಗೆ ಸಂಸ್ಕಾರ ನೀಡುತ್ತದೆ. ಪಾಲಕರು ಮಕ್ಕಳಿಗೆ ಪ್ರತಿದಿನ ಓದಲು ಪ್ರೇರೇಪಿಸಬೇಕು. ಶಿಕ್ಷಕರು ಸಹ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಬೇಕು. ಸರ್ಕಾರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಶೂ, ಹಾಲು ಇತರ ಸೌಲಭ್ಯ ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಿದ್ಯಾರ್ಥಿನಿಯರಿಂದ ಕಳಸ, ಕುಂಭ ಹಾಗೂ ಮಕ್ಕಳ ವಿವಿಧ ವೇಷಭೂಷಣದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೆರವಣಿಗೆ ನಡೆಸಲಾಯಿತು. ಮಕ್ಕಳಿಗೆ ದಾಖಲಾತಿ ಪತ್ರ ಹಾಗೂ ಸಮವಸ್ತ್ರ ವಿತರಿಸಲಾಯಿತು.
ಮುಖ್ಯ ಶಿಕ್ಷಕ ಬಾಬು ಹಕ್ಕಂಡಿ, ಶರಣಪ್ಪ, ಕಲಿಕಾ ಟಾಟಾ ಟ್ರಸ್ಟ್‌ನ ಸಂಯೋಜಕರಾದ ಕಲ್ಲಪ್ಪ, ಮೃತ್ಯುಂಜಯ, ಶಿಕ್ಷಕರಾದ ಮಂಜುನಾಥ, ಶಿಲ್ಪಾ ಗೌಡರ, ಮೇಘಾ, ಶಾರದಾ, ಇಮ್ತಿಯಾಜ್, ಪ್ರಮುಖರಾದ ವಿರುಪಾಕ್ಷಗೌಡ, ಬಸವರಾಜ ಉಳ್ಳಾಗಡ್ಡಿ, ನಾಗರಾಜ ತಳಗೇರಿ, ಪವಿತ್ರಾ ಪೂಜಾರ, ಹುಲಿಗೆಮ್ಮ, ಬಸವರಾಜ ಕಾಳಿ, ನಾಗಮ್ಮ ಗುದ್ನೆಪ್ಪನವರ ಇದ್ದರು.