

ಮಡಿಕೇರಿ: ಆರೋಗ್ಯ ಕ್ಷೇತ್ರದಲ್ಲಿ ಗುಣಾತ್ಮಕ ಸಂಶೋಧನೆಗಳು ಅತ್ಯಗತ್ಯ ಎಂದು ಆಲ್ ಇಂಡಿಯಾ ಇನ್ಸಟಿಟ್ಯುಟ್ ಆಫ್ ಮೆಡಿಕಲ್ ಸೈನ್ಸ್‌ನ ಡಾ.ಜಿ.ಕಲೈಸೇಲ್ವನ್ ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನಲ್ಲಿ ಕ್ವಾಲಿಟೇಟಿವ್ ಮೆಥೇಡ್ಸ್ ಇನ್ ಹೆಲ್ತ್ ರಿಸರ್ಚ್ ಎಂಬ ವಿಷಯದ ಕುರಿತು ಬುಧವಾರ ಆಯೋಜಿಸಿದ್ದ ಕಾರ್ಯಗಾರದಲ್ಲಿ ಮಾತನಾಡಿದರು.
ಆರೋಗ್ಯ ಕ್ಷೇತ್ರದಲ್ಲಿ ರೋಗಿಗಳ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಆರೋಗ್ಯ ಸಮಸ್ಯೆಗಳನ್ನು ಅನ್ವೇಷಣೆ ಮಾಡಿ ರೋಗಿಗಳ ಕೇಂದ್ರಿತ ಆರೈಕೆ ಅಭಿವೃದ್ಧಿ ಪಡಿಸುವುದರಲ್ಲಿ ಸಂಕೀರ್ಣಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಆಲ್ ಇಂಡಿಯಾ ಇನ್ಸಟಿಟ್ಯುಟ್ ಆಫ್ ಮೆಡಿಕಲ್ ಸೈನ್ಸ್‌ನ ಡಾ.ಮಂಗಲಗಿರಿ, ಡಾ.ರೀನಾಮೋಹನ್, ಪಾಂಡಿಚೇರಿ ವೈದ್ಯಕೀಯ ಕಾಲೇಜ್ ಮನಕುಲ ವಿನಯಗರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿ ಪ್ರಾಯೋಗಿಕ ಅಧಿವೇಶನ ನಡೆಸಿದರು.
ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಎ.ಜೆ.ಲೋಕೇಶ್, ಸಮುದಾಯ ವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಮತ್ತು ಡಾ.ಎಸ್.ಎಚ್.ಮಹೇಶ್ ಇತರರಿದ್ದರು. ಕಾರ್ಯಗಾರದಲ್ಲಿ ವಿವಿಧ ವೈದ್ಯಕೀಯ ಕಾಲೇಜುಗಳ ಭೋಧಕ ಸಿಬ್ಬಂದಿಗಳು ಹಾಗೂ ಸ್ನಾತ್ತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.