

ಸುಂಟಿಕೊಪ್ಪ: ಪಟ್ಟಣದ ಸಂತ ಮೇರಿ ಆಂಗ್ಲ ವಿದ್ಯಾ ಸಂಸ್ಥೆಯ ಪ್ರೌಢಶಾಲೆ ಬಾಲಕರು ಫುಟ್ಬಾಲ್‌ನಲ್ಲಿ ವಿಭಾಗೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಗೊಂಡಿದ್ದು, ದಕ್ಷಿಣ ಕನ್ನಡದ ಬಜ್ಪೆಯಲ್ಲಿ ನಡೆಯಲ್ಲಿರುವ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಥಮ ಬಾರಿಗೆ ಪ್ರೌಢಶಾಲಾ ಬಾಲಕರ ತಂಡವು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡು, ಆಮ್ಮತ್ತಿ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪಂದ್ಯಾವಳಿಯ ಫೈನಲ್ ತಲುಪಿ ಪಾಲಿಬೆಟ್ಟ ತಂಡದ ವಿರುದ್ಧ 5-4 ಗೋಲುಗಳಿಂದ ಜಯದ ನಗೆ ಬೀರಿತು.
ಮೊದಲಾರ್ಧ ಪಂದ್ಯದಲ್ಲಿ 2 ತಂಡಗಳು 1-1 ಗೋಲುಗಳಿಸುವ ಮೂಲಕ ಸಮಬಲ ಸಾಧಿಸಿದವು. ನಂತರ ದ್ವಿತೀಯಾರ್ಧದಲ್ಲಿ 2 ತಂಡಗಳು ಯಾವುದೇ ರೀತಿಯ ಗೋಲುಗಳಿಸದ ಹಿನ್ನೆಲೆಯಲ್ಲಿ ಟ್ರೈಬ್ರೆಕರ್‌ನಲ್ಲಿ ಸಂತ ಮೇರಿ ಆಂಗ್ಲ ವಿದ್ಯಾ ಸಂಸ್ಥೆ ಬಾಲಕರು 5-4 ಗೋಲು ಗಳಿಸುವ ಮೂಲಕ ಜಯವನ್ನು ತನ್ನದಾಗಿಸಿಕೊಂಡು ವಿಭಾಗೀಯ ಮಟ್ಟಕ್ಕೆ ಪ್ರವೇಶ ಪಡೆದುಕೊಂಡಿದೆ. ಸೆ.12 ರಿಂದ ದಕ್ಷಿಣ ಕನ್ನಡದಲ್ಲಿ ಆರಂಭಗೊಳ್ಳಲಿರುವ ಪಂದ್ಯಾವಳಿಗೆ ತಂಡ ತೆರಳಲಿದೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಣ ಶಿಕ್ಷಕರಾದ ಸುನಿಲ್, ಶುೃತಿ, ಚಂದ್ರಶೇಖರ್ ತರಬೇತಿ ಒದಗಿಸುತ್ತಿದ್ದಾರೆ.
ಪ್ರೌಢಶಾಲಾ ಬಾಲಕರ ತಂಡಕ್ಕೆ ಶಾಲೆ ವ್ಯವಸ್ಥಾಪಕ ರೇ.ಫಾ.ವಿಜಯಕುಮಾರ್, ಸಂತ ಮೇರಿ ಆಂಗ್ಲ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಸೇಲ್ವರಾಜ್ ಅಭಿನಂದಿಸಿದ್ದಾರೆ.