

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ನಗರದಲ್ಲಿ ನಿರ್ವಿುಸುತ್ತಿರುವ ಚತುಷ್ಪಥ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ.
ಲೋಕೋಪಯೋಗಿ ಇಲಾಖೆ ವತಿಯಿಂದ ಒಟ್ಟು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ಹಲಗೇರಿ ರಸ್ತೆ (ಸಮ್ಮಸಗಿ-ಬಿಳಿಗಿರಿರಂಗನದಿಟ್ಟು ರಾಜ್ಯ ಹೆದ್ದಾರಿ)ಯನ್ನು ಚತುಷ್ಪಥವನ್ನಾಗಿ ನಿರ್ವಿುಸಲಾಗುತ್ತಿದೆ. ಈ ರಸ್ತೆ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿಯ ಹಲಗೇರಿ ಕ್ರಾಸ್ನಿಂದ ಹೊರವಲಯದ ಎನ್ಎಚ್-04ರಲ್ಲಿನ ಸೇತುವೆ ವರೆಗೆ ಒಟ್ಟು 1.83 ಕಿ.ಮೀ. ಉದ್ದವಿದೆ.
ನಗರದ ಮಧ್ಯ ಭಾಗದಿಂದ ಹಾದು ಹೋಗಿರುವ ಈ ರಸ್ತೆ ನಗರ ಯೋಜನಾ ಪ್ರಾಧಿಕಾರದ ಮಾಸ್ಟರ್ಪ್ಲಾನ್ ಪ್ರಕಾರ ಒಟ್ಟು 24 ಮೀಟರ್ ಅಗಲವಿದೆ. ಬಹುತೇಕ ಕಡೆಗಳಲ್ಲಿ ರಸ್ತೆ ಅತಿಕ್ರಮಣವಾಗಿದೆ. ಆದರೆ, ಲೋಕೋಪಯೋಗಿ ಇಲಾಖೆಯವರು ರಸ್ತೆ ನಿರ್ವಣಕ್ಕೂ ಮುನ್ನ ಅತಿಕ್ರಮಣ ತೆರವುಗೊಳಿಸಿಲ್ಲ. ಅಲ್ಲದೆ, ಈಗಾಗಲೇ 1.3 ಕಿ.ಮೀ.ನಷ್ಟು ರಸ್ತೆ ನಿರ್ವಿುಸಲಾಗಿದೆ. ಅದರಲ್ಲಿ ಕೆಲವೆಡೆ 18 ಮೀಟರ್, ಇನ್ನೂ ಕೆಲವೆಡೆ 19 ಮೀಟರ್ನಷ್ಟು ರಸ್ತೆ ಅಗಲವಿದೆಯೇ ಹೊರತು 24 ಮೀಟರ್ ವಿಸ್ತರಿಸಿದ್ದು ಎಲ್ಲಿಯೂ ಕಾಣಿಸುತ್ತಿಲ್ಲ. ರಸ್ತೆಯುದ್ದಕ್ಕೂ ಗಟಾರ್, ಫುಟ್ಪಾತ್ ನಿರ್ವಣಕ್ಕೂ ಜಾಗ ಬಿಟ್ಟಿಲ್ಲ. ಕೆಇಬಿ ಗ್ರಿಡ್ ಕಾಂಪೌಂಡ್ಗೆ ಹೊಂದಿಕೊಂಡು ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ.
ಈ ರೀತಿ ರಸ್ತೆ ನಿರ್ವಣದಿಂದ ಅಕ್ಕಪಕ್ಕದ ನಿವಾಸಿಗಳು, ಪಾದಚಾರಿಗಳು ಹೇಗೆ ಓಡಾಡಬೇಕು. ಹಲಗೇರಿ ರಸ್ತೆಯಲ್ಲಿ ನಿತ್ಯವೂ ಎಪಿಎಂಸಿಗೆ ಬರುವ ಲಾರಿ, ಗೂಡ್ಸ್ ವಾಹನಗಳು ಹಾಗೂ ಬಸ್ಗಳ ಸಂಚಾರ ಅಧಿಕವಾಗಿರುತ್ತದೆ. ಇಂತಹ ಸಮಯದಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ರಸ್ತೆ ನಿರ್ವಿುಸಬೇಕಾದ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಿಸಿದರೆ, ಜನರ ಗತಿ ಏನು ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಶಾಸಕರ ಕಡೆ ಬೊಟ್ಟು: ರಸ್ತೆ ಕಾಮಗಾರಿ ಕುರಿತು ಪಿಡಬ್ಲ್ಯುಡಿ ಸೆಕ್ಷನ್ ಆಫೀಸರ್ ಸದಾನಂದ ಲಮಾಣಿ ಅವರನ್ನು ಕೇಳಿದಾಗ, ಹಲಗೇರಿ ರಸ್ತೆ ಅತಿಕ್ರಮಣವಾಗಿರುವುದನ್ನು ಸರ್ವೆ ಮಾಡಿಸಿದ್ದೇವೆ. ಆದರೆ, ಸರ್ವೆ ಇಲಾಖೆಯವರು ಅತಿಕ್ರಮಣದ ಕುರಿತು ಗುರುತು ಮಾಡಿಲ್ಲ. ಗಟಾರ್, ಪುಟ್ಪಾತ್ ನಿರ್ವಿುಸುವ ಕುರಿತು ಕ್ರಿಯಾಯೋಜನೆಯಲ್ಲಿ ಇಲ್ಲ ಎಂದರು. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ಕೇಳಿದಾಗ, ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇವೆ ಎಂದು ಹೇಳಿ ಸುಮ್ಮನಾದರು.
ಹಲಗೇರಿ ರಸ್ತೆಯನ್ನು 19 ಮೀಟರ್ ಅಗಲಕ್ಕೆ ನಿರ್ವಿುಸಲು ಕ್ರಿಯಾಯೋಜನೆಯಲ್ಲಿದೆ. ಆದರೆ, ಕೆಲವೆಡೆ ಅತಿಕ್ರಮಣವಾಗಿದೆ. ಹೀಗಾಗಿ ಅಲ್ಲಿ ಕಡಿಮೆ ರಸ್ತೆ ಬಂದಿದೆ. ಅದನ್ನು ತೆರವುಗೊಳಿಸಲು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಎಲ್ಲರ ಒಪ್ಪಿಗೆ ಪಡೆದು ಕಾಮಗಾರಿ ಮಾಡಬೇಕಿದೆ. | ಆರ್. ಮಂಜುನಾಥ, ಲೋಕೋಪಯೋಗಿ ಇಲಾಖೆ ಎಇಇ ಲೋಕೋಪಯೋಗಿ ಇಲಾಖೆಯಿಂದ ನಿರ್ವಿುಸುತ್ತಿರುವ ಹಲಗೇರಿ ರಸ್ತೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ರಸ್ತೆಗೆ ಗಟಾರ್, ಫುಟ್ಪಾತ್ ಇಲ್ಲ. ಕಾಮಗಾರಿ ಕ್ರಿಯಾಯೋಜನೆ ಪ್ರತಿ ನೀಡುವಂತೆ ಅಧಿಕಾರಿಗಳನ್ನು ಕೇಳಿದರೆ ಕೊಡುತ್ತಿಲ್ಲ. ಗುತ್ತಿಗೆದಾರರನ್ನು ನಾವು ನೋಡಿಯೇ ಇಲ್ಲ. ಈಗ ತರಾತುರಿಯಲ್ಲಿ ಕಾಮಗಾರಿ ಮಾಡಿ ಗುತ್ತಿಗೆದಾರರು ಹೋಗುತ್ತಾರೆ. ನಾಳೆ ಸ್ಥಳೀಯ ಜನಪ್ರತಿನಿಧಿಗಳಾದ ನಾವು ಯಾರನ್ನು ಕೇಳಬೇಕು? ಜನತೆಗೆ ಏನು ಉತ್ತರ ಕೊಡಬೇಕು?. ಆದ್ದರಿಂದ, ಜಿಲ್ಲಾಧಿಕಾರಿ ಕಾಮಗಾರಿ ಪರಿಶೀಲಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. | ರಮೇಶ ಕರಡೆಣ್ಣನವರ, ನಗರಸಭೆ ಸದಸ್ಯ