ಹತ್ತು ಅಡಿ ಉದ್ದದ ಹೆಬ್ಬಾವು ಸೆರೆ

mkg
Published on

ನ್ಯಾಮತಿ: ಹೊನ್ನಾಳಿ ಅರಣ್ಯ ವಲಯ ವ್ಯಾಪ್ತಿಯ ದೊಡ್ಡೇರಹಳ್ಳಿಯ ಜಮೀನೊಂದರಲ್ಲಿ ಶುಕ್ರವಾರ ಕಾಣಿಸಿಕೊಂಡ 10 ಅಡಿ ಉದ್ದದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು, ಗಂಗವ್ವನಸರ ಅರಣ್ಯದಲ್ಲಿ ಬಿಟ್ಟರು.
ಪ್ರತ್ಯಕ್ಷದರ್ಶಿ ಜಯಪ್ರಕಾಶ್ ಮಾಹಿತಿ ಆಧರಿಸಿ, ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹೊಸಹಳ್ಳಿ ಗ್ರಾಮದ ಸ್ನೇಕ್ ಸುರೇಶ್ ಹುಡೇದ್ ಸಹಕಾರದೊಂದಿಗೆ ಹೆಬ್ಬಾವು ಸೆರೆ ಹಿಡಿದು ಸುರಕ್ಷಿತವಾಗಿ ಶಿಕಾರಿಪುರ- ಹೊನ್ನಾಳಿ ಗಡಿಭಾಗದ ಕಾಡಿನಲ್ಲಿ ಬಿಟ್ಟರು ಎಂದು ಡಿಆರ್‌ಎಫ್‌ಒ ಶಿವಯೋಗಿ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಕೆ.ಆರ್. ಚೇತನ್, ಅರಣ್ಯ ವೀಕ್ಷಕ ಅರುಣ್‌ಕುಮಾರ್, ಫಾರೆಸ್ಟ್ ಗಾರ್ಡ್ ಪ್ರಭಾಕರ್, ಮೌನೇಶ್ ಮತ್ತು ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net