ಕಬ್ಬಿನ ಗದ್ದೆಯಲ್ಲಿದ್ದ ಹೆಬ್ಬಾವು ರಕ್ಷಣೆ

Oplus_131072
ಯಳಂದೂರು ಸಮೀಪದ ಕಾಗಲವಾಡಿ ಗ್ರಾಮದ ಕಬ್ಬಿನ ಗದ್ದೆಯಲ್ಲಿದ್ದ ಹೆಬ್ಬಾವು.
Published on

ಯಳಂದೂರು: ಸಮೀಪದ ಕಾಗಲವಾಡಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಇದ್ದ ಭಾರಿ ಗಾತ್ರದ ಹೆಬ್ಬಾವನ್ನು ಸೋಮವಾರ ರಾತ್ರಿ ರಕ್ಷಿಸಲಾಯಿತು.

ಕಾಗಲವಾಡಿ ಗ್ರಾಮದ ಗುರು ಅವರು ತಮ್ಮ ಜಮೀನಿನಲ್ಲಿ ಹೆಬ್ಬಾವು ಇದೆ ಎಂದು ಸಂತೆಮರಹಳ್ಳಿಯ ಉರಗ ತಜ್ಞ ಸ್ನೇಕ್ ಮಹೇಶ್ ಅವರಿಗೆ ದೂರವಾಣಿ ಕರೆ ಮಾಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಮಹೇಶ್ ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖೆಯ ಸಿಬ್ಬಂದಿಯ ನೆರವಿನೊಂದಿಗೆ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net