

ಕೊಳ್ಳೇಗಾಲ: ತಾಲೂಕಿನ ಉಗನೀಯ ಗ್ರಾಮದಲ್ಲಿರುವ ಕಬ್ಬಿನ ಜಮೀನೊಂದರಲ್ಲಿ ಗುರುವಾರ ಕಾಣಿಸಿಕೊಂಡಿದ್ದ ಸುಮಾರು 12 ಅಡಿ ಉದ್ದದ ಹೆಬ್ಬಾವನ್ನು ಉರಗ ಸಂರಕ್ಷಕ ಸ್ನೇಕ್ ಬಾಬು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಗ್ರಾಮದ ರಮೇಶ್ ಅವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ ಕೂಲಿ ಕಾರ್ಮಿಕರಿಗೆ ಹೆಬ್ಬಾವು ಕಾಣಿಸಿಕೊಂಡಿದೆ. ಭಾರಿ ಗಾತ್ರದ ಹೆಬ್ಬಾವು ನೋಡಿ ಕಾರ್ಮಿಕರು ಹೌಹಾರಿದ್ದಾರೆ. ಬಳಿಕ ಜಮೀನು ಮಾಲೀಕ ರಮೇಶ್, ಉರಗ ಸಂರಕ್ಷಕ ಸ್ನೇಕ್ ಬಾಬು ಅವರಿಗೆ ಕರೆ ಮಾಡಿದ್ದು. ಸ್ಥಳಕ್ಕೆ ಬಂದ ಸ್ನೇಕ್ ಬಾಬು ಸುರಕ್ಷಿತವಾಗಿ ಹೆಬ್ಬಾವು ಹಿಡಿದು ಸಂರಕ್ಷಿಸಿ ಅರಣ್ಯಾಧಿಕಾರಿಗಳ ಸೂಚನೆಯಂತೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.