ತಾ.ಪಂ ಕಚೇರಿಯೊಳಗಡೆ ಹೆಬ್ಬಾವು:ಸುರಕ್ಷಿತವಾಗಿ ಕಾಡಿಗೆ ರವಾನೆ

hebbav
ನಗರದ ತಾಲೂಕು ಕಚೇರಿಯ ಸರ್ವೇ ಇಲಾಖೆಗೆ ಸಂಬಂಧ ಪಟ್ಟ ರೆಕಾರ್ಡ್ ಇರಿಸುವ ಕೋಣೆಯೊಳಗಡೆ ಕಂಡು ಬಂದ ಹೆಬ್ಬಾವು
Published on

ಸುಳ್ಯ: ನಗರದ ತಾಲೂಕು ಕಚೇರಿಯ ಸರ್ವೇ ಇಲಾಖೆಗೆ ಸಂಬಂಧಪಟ್ಟ ರೆಕಾರ್ಡ್ ಇರಿಸುವ ಕೋಣೆಯೊಳಗಡೆ ಭಾರಿ ಗಾತ್ರದ ಹೆಬ್ಬಾವೊಂದು ಬುಧವಾರ ಪ್ರತ್ಯಕ್ಷವಾಗಿದ್ದು ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಬೆಳಗ್ಗೆ ಸಿಬ್ಬಂದಿ ಬಂದು ಬಾಗಿಲು ತೆಗೆದು ನೋಡಿದಾಗ ಹೆಬ್ಬಾವು ಕಂಡಿದೆ. ತಕ್ಷಣ ವಿಷಯ ತಿಳಿದ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಉರಗ ತಜ್ಞ ಮೋಹನ್ ಪರಿವಾರಕಾನ ಅವರನ್ನು ಕರೆಸಿ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net