ಕಾಫಿತೋಟದಲ್ಲಿ ಹೆಬ್ಬಾವು ಪತ್ತೆ

python
Published on

ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಸುಂಕಸಾಲೆ ಸಮೀಪದ ಮೈದಾಡಿಯ ಶ್ರೀನಿವಾಸಗೌಡ ಎಂಬುವವರ ಕಾಫಿತೋಟದಲ್ಲಿ ಕಳೆದ ಎರಡು ದಿನಗಳ ಹಿಂದೆ ಪತ್ತೆಯಾಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಶನಿವಾರ ಉರಗ ಪ್ರೇಮಿ ರಿಜ್ವಾನ್ ಹಿಡಿದು ಕುದುರೆಮುಖ ಅರಣ್ಯಕ್ಕೆ ಬಿಟ್ಟರು.

ಸುಮಾರು 14 ಅಡಿ ಉದ್ದದ ಹೆಬ್ಬಾವು ಕಾಫಿತೋಟದಲ್ಲೆ ಬೀಡು ಬಿಟ್ಟಿತ್ತು. ಕಾಫಿತೋಟದ ಮಾಲೀಕ ಶ್ರೀನಿವಾಸಗೌಡ ಉರಗ ಪ್ರೇಮಿ ರಿಜ್ವಾನ್ ಅವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ ರಿಜ್ವಾನ್ ಹೆಬ್ಬಾವನ್ನು ಸೆರೆಹಿಡಿದು ಕುದುರೆಮುಖ ಅರಣ್ಯಕ್ಕೆ ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net