ನಾಲ್‌ರೋಡ್‌ನಲ್ಲಿ ಹೆಬ್ಬಾವು ಸಾವು

26 HANUR 2
Published on

ಹನೂರು: ಮಲೆ ಮಹದೇಶ್ವರ ವನ್ಯಜೀವಿಧಾಮದ ನಾಲ್‌ರೋಡ್ ಅರಣ್ಯ ಪ್ರದೇಶದಲ್ಲಿ ಪ್ರಾಣಿಯೊಂದನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೆ ಹೆಬ್ಬಾವೊಂದು ಮೃತಪಟ್ಟಿದೆ.

ಹೂಗ್ಯಂ ವನ್ಯಜೀವಿ ವಲಯದ ನಾಲ್‌ರೋಡ್ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಸುಮಾರು 10 ಅಡಿ ಉದ್ದವಿರುವ ಹೆಬ್ಬಾವೊಂದು ಮಲಗಿರುವ ಹಾಗೆ ಕಂಡು ಬಂದಿದೆ. ಅದನ್ನು ಅರ್ಧ ಗಂಟೆ ವೀಕ್ಷಿಸಿದ್ದಾರೆ. ಆದರೆ ಹೆಬ್ಬಾವು ಸ್ಥಳ ಬಿಟ್ಟು ಕದಲಲಿಲ್ಲ.

ಬಳಿಕ ಸಮೀಪಕ್ಕೆ ತೆರಳಿ ನೋಡಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪಶುವೈದ್ಯಾಧಿಕಾರಿ ಸಿದ್ದರಾಜು ಮರಣೋತ್ತರ ಪರೀಕ್ಷೆ ನಡೆಸಿದ್ದು, ಯಾವುದೋ ಪ್ರಾಣಿಯನ್ನು ನುಂಗಿ ಅರಿಗಿಸಿಕೊಳ್ಳಲಾಗದೆ ಮೃತಪಟ್ಟಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net