

ಗುತ್ತಲ: ಬಸವೇಶ್ವರ ಜಯಂತಿ ಅಂಗವಾಗಿ ಪಟ್ಟಣದ ಪ್ಯಾಟಿ ಬಸವೇಶ್ವರ ದೇವಸ್ಥಾನದ ನೂತನ ರಥೋತ್ಸವ ವೈಭವದಿಂದ ಬುಧವಾರ ಜರುಗಿತು.
ನೂತನ ರಥೋತ್ಸವಕ್ಕೆ ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರೇಶ್ವರ ಸ್ವಾಮೀಜಿ, ಗುತ್ತಲ ಕಲ್ಮಠದ ಗುರುಸಿದ್ಧ ಸ್ವಾಮೀಜಿ ಚಾಲನೆ ನೀಡಿದರು. ರಥದ ಮುಂದೆ ನೂರಾರು ಜೋಡಿ ಎತ್ತುಗಳ ಭವ್ಯ ಮೆರವಣಿಗೆ ಗಮನ ಸೆಳೆಯಿತು. ಸಣ್ಣ ಸಣ್ಣ ಕರುಗಳ ಮೆರವಣಿಗೆಯನ್ನು ಚಿಣ್ಣರು ಹಾಗೂ ಯುವಕರು ನಡೆಸಿದರು.
ರಥೋತ್ಸವದ ಹಿನ್ನೆಲೆಯಲ್ಲಿ ರಥ ಸಾಗಿ ಬರುವ ಮಾರ್ಗವನ್ನು ಶೃಂಗರಿಸಲಾಗಿತ್ತು. ರಥದಲ್ಲಿ ಬಸವೇಶ್ವರರ ಭಾವ ಚಿತ್ರ ವಿರಾಜಮಾನವಾಗಿತ್ತು.
ರಥೋತ್ಸವಕ್ಕೂ ಮುನ್ನ ನೆಗಳೂರ ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಕಳಸಾರೋಹಣ ನೆರವೇರಿಸಿದ್ದರು. ರಥದ ಶಿಲ್ಪಿ ಉಮೇಶ ಸಾಗರ ಹಾಗೂ ಮಂಜುನಾಥ ಸಾಗರ ಅವರನ್ನು ಸನ್ಮಾನಿಸಿಲಾಯಿತು.
ರಥೋತ್ಸವದಲ್ಲಿ ದೇವಸ್ಥಾನ ಕಮಿಟಿ ಅಧ್ಯಕ್ಷ ಈಶ್ವರ ನಂದಿ, ಪ.ಪಂ ಉಪಾಧ್ಯಕ್ಷ ಪರಶುರಾಮ ಯಲಗಚ್ಚ, ಸದಸ್ಯ ಭರಮಣ್ಣ ಹಾದಿಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ, ಮಾಜಿ ಸದಸ್ಯ ಗುಡ್ಡಪ್ಪ ಗೊರವರ, ಶಂಭುಲಿಂಗಯ್ಯ ಲಕ್ಷ್ಮೇಶ್ವರಮಠ, ಶೇಖಣ್ಣ ಹಾವೇರಿ, ಶಿವಯೋಗೆಪ್ಪ ಹಾವೇರಿ, ಶಿವಾನಂದ ನಂದಿಗೊಣ್ಣನವರ, ವಿರೂಪಾಕ್ಷಪ್ಪ ಹಾವೇರಿ, ಬಸಣ್ಣ ಶೀತಾಳ, ವಿರೂಪಾಕ್ಷಪ್ಪ ಶೀತಾಳ, ಹೇಮಣ್ಣ ಬತ್ತದ, ಚನ್ನಪ್ಪ ಹೊನ್ನಮ್ಮನವರ, ಈರಣ್ಣ ಕಬ್ಬಿಣದ, ಸಿದ್ದಪ್ಪ ಕಾಗಿನೆಲ್ಲಿ, ಗಿರೀಶ ಮಳಗಿ, ಚನ್ನಬಸಪ್ಪ ಮರಿಯಾನಿ, ಚನ್ನಪ್ಪ ಕಾಗಿನೆಲ್ಲಿ, ಪುಟ್ಟಪ್ಪ ಪಟ್ಟಣಶೆಟ್ಟಿ, ಬಸವರಾಜ ಕಾಗಿನೆಲ್ಲಿ, ಮಹೇಶ ಗಂಗಣ್ಣನವರ, ಬಸಣ್ಣ ಗಂಗಣ್ಣನವರ, ಮಾನಪ್ಪ ಬಡಿಗೇರ, ಪಾಲಾಕ್ಷಯ್ಯ ನೆಗಳೂರ, ನಿಂಬಣ್ಣ ಅಂಗಡಿ, ಮಹಾಂತಯ್ಯ ಓದಿಸೋಮಠ, ಶಂಕರಸಿಂಗ್ ಭೀಮಸಿಂಗನವರ, ಅರ್ಚಕ ಪುಟ್ಟಯ್ಯ ದೇವಗಿರಿಮಠ ಇತರರಿದ್ದರು.