

ಬೆಳಗಾವಿ: ಜಿಲ್ಲೆ ಸೇರಿದಂತೆ ಇಡಿ ರಾಜ್ಯದಲ್ಲಿ ಮಳೆ ಅಬ್ಬರ ನಿಂತಿದ್ದು, ರಸ್ತೆಗಳಲ್ಲಿ ಬಿದ್ದ ಗುಂಡಿ ಮುಚ್ಚುವ ಕಾರ್ಯ ಶರವೇಗದಲ್ಲಿ ನಡೆಯುತ್ತಿದೆ. ಒಂದು ತಿಂಗಳ ಅವದಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ವರ್ಷಗಳಲ್ಲಿ ಸುರಿಯದಿರುವ ಮಳೆ ಈ ವರ್ಷ ಹೆಚ್ಚು ಸುರಿದಿರುವದರಿಂದ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ರಸ್ತೆಗಳು ಅಲ್ಲಲ್ಲಿ ಹಾಳಾಗಿದೆ. ಈ ಹಾಳಾಗಿರುವ ರಸ್ತೆ ಹಾಗೂ ರಸ್ತೆಗಳಲ್ಲಿ ಬಿದ್ದ ಗುಂಡಿ ಮುಚ್ಚುವ ಕಾರ್ಯಕ್ಕೆ ಡಿ. 15 ಕೊನೆ ಅವಧಿ ನೀಡಲಾಗಿದೆ. ಈ ರಸ್ತೆ ಕಾಮಗಾರಿಗೆ ಈಗಾಗಲೇ ಹಣವನ್ನು ನೀಡಲಾಗಿದ್ದು,ಈ ಕಾರ್ಯ ಮುಗಿದ ನಂತರ ಇನ್ನು ಹೆಚ್ಚಿನ ಹಣ ನೀಡಲಾಗುವುದು ಎಂದು ಹೇಳಿದರು