ಶೇ.50 ಹಾಸಿಗೆ ಕೊಡುವುದಿಲ್ಲವೆಂದ ಖಾಸಗಿ ಆಸ್ಪತ್ರೆಗಳು

Hospital beds
ಸಾಂದರ್ಭಿಕ ಚಿತ್ರ
Published on

ಬೆಂಗಳೂರು : ಕರೊನಾ ಸೋಂಕಿತರ ಚಿಕಿತ್ಸೆಗೆ ಒಟ್ಟು ಹಾಸಿಗೆಯ ಶೇ.50 ಹಾಸಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಬಿಬಿಎಂಪಿ ಶೋಕಾಸ್ ನೋಟಿಸ್‌ಗೆ ಸ್ಪಷ್ಟೀಕರಣ ಪತ್ರ ಬರೆದಿವೆ.

ನಗರದ 36 ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಕೆಲವು ಆಸ್ಪತ್ರೆಗಳು ಕೆಲವು ಸ್ಪಷ್ಟೀಕರಣ ನಿಡಿದ್ದು, ಉಳಿದ ಕೆಲವು ಆಸ್ಪತ್ರೆಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬಗ್ಗೆ ಸ್ಪಷ್ಟೀಕರಣ ಪತ್ರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. -ಎನ್. ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

ಸರ್ಕಾರದ ಸೂಚನೆಯಂತೆ ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಒಟ್ಟು ಹಾಸಿಗೆಗಳಲ್ಲಿ ಶೇ.50 ಹಾಸಿಗೆಯನ್ನು ಕರೊನಾ ಚಿಕಿತ್ಸೆಗೆ ನೀಡಬೇಕು. ಹಾಸಿಗೆ ನಿಡದ ಆಸ್ಪತ್ರೆಗಳ ವಿರುದ್ಧ ಸೆ.16 ರಂದು ಬಿಬಿಎಂಪಿ 36 ಖಾಸಗಿ ಆಸ್ಪತ್ರೆಗಳಿಗೆ ಅಂತಿಮ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಜತೆಗೆ 48 ಗಂಟೆಗಳ ಒಳಗಾಗಿ ಹಾಸಿಗೆ ಬಿಟ್ಟುಕೊಡುವಂತೆ ನಿರ್ದೇಶನ ನಿಡಿ, ಸಹಕರಿಸದಿದ್ದಲ್ಲಿ ಪರವಾನಗಿ ರದ್ದು ಮಾಡುವ ಕುರಿತು ಎಚ್ಚರಿಕೆ ನೀಡಲಾಗಿತ್ತು. ಇದರಲ್ಲಿ ಕೆಲವು ಆಸ್ಪತ್ರೆಗಳು ಒಟ್ಟು ಹಾಸಿಗೆಯಲ್ಲಿ ಶೇ.50 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಪಾಲಿಕೆಗೆ ಪತ್ರ ಬರೆದಿವೆ.

ಪತ್ರದಲ್ಲಿ ಏನಿದೆ?
ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಪ್ರಕಾರ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ಘಟಕ, ಡಯಾಲಿಸಿಸ್ ಘಟಕ, ತುರ್ತು ಚಿಕಿತ್ಸಾ ಘಟಕ, ಕಾರ್ಮಿಕ ವಾರ್ಡ್ ಸೇರಿ ವಿವಿಧ ವಿಶೇಷ ವಾರ್ಡ್‌ಗಳಿರುತ್ತವೆ. ಈ ಘಟಕಗಳ ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಬಿಟ್ಟುಕೊಡಲು ಸಾಧ್ಯವಿಲ್ಲ. ಹೀಗಾಗಿ, ಒಟ್ಟು ಆಸ್ಪತ್ರೆಯಲ್ಲಿನ ಹಾಸಿಗೆಯ ಶೇ,50 ಹಾಸಿಗೆ ಬಿಟ್ಟುಕೊಡುವುದಿಲ್ಲ. ಈ ಬಗ್ಗೆ ಬಿಬಿಎಂಪಿ ಪರಿಶೀಲನೆ ಮಾಡಿ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net