ಅಗಾಧ ಜ್ಞಾನ ಹೊಂದಿದ್ದ ಬಹುಶ್ರುತ ವಿದ್ವಾಂಸ : ಉಳಿಯತ್ತಾಯ ವಿಷ್ಣು ಆಸ್ರ ಸ್ಮರಣೆ

New Project (4)
Published on

ಬದಿಯಡ್ಕ: ಬಹುಭಾಷಾ ವಿದ್ವಾಂಸ, ತುಳು ಭಾಷಾ ಸಂಶೋಧಕ ದಿ.ಪುಂಡೂರು ವೆಂಕಟರಾಜ ಪುಣಿಚಿತ್ತಾಯರ ಬದುಕು-ಸಾಧನೆಗಳು ಮಾಸದ ನೆನಪುಗಳಾಗಿವೆ. ಸರಳ ವ್ಯಕ್ತಿತ್ವ, ವಸ್ತು-ವಿಷಯಗಳ ಮಂಡನಾ ಶೈಲಿ, ಯಕ್ಷಗಾನ ಸಹಿತ ಕಲಾ ಪ್ರಕಾರಗಳಲ್ಲಿ ಅವರಿಗಿದ್ದ ಆಳವಾದ ಜ್ಞಾನ ಅಚ್ಚರಿಗೊಳಿಸುವಂತದ್ದು ಎಂದು ಉಳಿಯತ್ತಾಯ ವಿಷ್ಣು ಆಸ್ರ ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೇತೃತ್ವದಲ್ಲಿ, ಬುಧವಾರ ಬದಿಯಡ್ಕ ವಳಮಲೆಯಲ್ಲಿ ಪುವೆಂಪು ನೆನಪು ಸಮಾರಂಭದಲ್ಲಿ ಮಾತನಾಡಿದರು.

ಬದಿಯಡ್ಕ ಗ್ರಾ.ಪಂ. ಅಧ್ಯಕ್ಷೆ ಶಾಂತಾ ಬಿ. ಅಧ್ಯಕ್ಷತೆ ವಹಿಸಿದ್ದರು. ಎಡನೀರು ಮಠದ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕಲ್ಲೂರಾಯ, ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಗಮಕ ಕಲಾ ಪರಿಷತ್ತಿನ ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್, ನಿವೃತ್ತ ಉಪನ್ಯಾಸಕ ಪುರುಷೋತ್ತಮ ಪುಣಿಚಿತ್ತಾಯ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಗಡಿನಾಡ ಸಾಂಸ್ಕೃತಿಕ-ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ, ಕರ್ನಾಟಕ ಜಾನಪದ ಪರಿಷತ್ ಗಡಿನಾಡ ಘಟಕ ಕಾರ್ಯಾಧ್ಯಕ್ಷ ಜಡ್ ಎ.ಕಯ್ಯರ್, ಕನ್ನಡ ಭವನ ಸಂಸ್ಥಾಪಕ ವಾಮನ ರಾವ್ ಬೇಕಲ, ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಪು, ಕಾರ್ಯನಿರತ ಪತ್ರಕರ್ತರ ಸಂಘದ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಸರ್ದಾರ್ ಪಟೇಲ್ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಸ್ವಾಗತ ಸಮಿತಿ ಗೌರವ ಸಲಹೆಗಾರ ರಮಾನಾಥ ರೈ, ಸ್ವಾಗತ ಸಮಿತಿ ಸಂಯೋಜಕ ವಿಜಯರಾಜ ಪುಣಿಚಿತ್ತಾಯ ಪುಂಡೂರು ಉಪಸ್ಥಿತರಿದ್ದರು. ಪ್ರೊ.ಎ.ಶ್ರೀನಾಥ್ ಸ್ವಾಗತಿಸಿದರು. ಸಂಘಟಕ ಕೃಷ್ಣ ಡಿ.ಬೆಳಿಂಜ ನಿರೂಪಿಸಿದರು.

ವಿಶಿಷ್ಟ ಸಾಧನಾ ಪ್ರಶಸ್ತಿ ಪ್ರದಾನ

ಸಾಹಿತಿ ವಿ.ಬಿ.ಅರ್ತಿಕಜೆ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ದ.ಕ. ಮಾಜಿ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ನುಡಿನಮನ ಸಲ್ಲಿಸಿದರು. ದಿ.ಪುಣಿಚಿತ್ತಾಯರ ಕೃತಿಗಳ ಬಗ್ಗೆ ಸಂಶೋಧಕ ಡಾ.ರಾಧಾಕೃಷ್ಣ ಬೆಳ್ಳೂರು ಉಪನ್ಯಾಸ ನೀಡಿದರು. ಹಿರಿಯ ವಿದ್ವಾಂಸ, ಯಕ್ಷಗಾನ ಅಥರ್ಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರಿಗೆ ಪ್ರಾಧಿಕಾರದ ವಿಶಿಷ್ಟ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net