

ಮಂಗಳೂರು: ಪುತ್ತೂರಿನ ನಂದಗೋಕುಲ ವೇದಿಕೆಯ ದ್ವಾರಕಾ ಪ್ರತಿಷ್ಠಾನ ಹಾಗೂ ಕೃಷ್ಣ ಭಟ್ ಪ್ರತಿಷ್ಠಾನ ಚೂಂತಾರು ಇವರ ಸಹಯೋಗದಲ್ಲಿ ನಡೆದ ಉಚಿತ ವಸಂತ ವೇದಪಾಠ ಶಿಬಿರದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಮಾರ್ಗದರ್ಶನದಲ್ಲಿ ಉಚಿತ ಯೋಗ ಶಿಬಿರ ಏ.14ರಿಂದ ಮೇ 12ರ ವರೆಗೆ ಜರುಗಿತು.
ವೇದಪಾಠದೊಂದಿಗೆ ಯೋಗ ತರಬೇತಿಯಲ್ಲಿ ಆಸನಗಳು, ಪ್ರಾಣಾಯಾಮ, ಧ್ಯಾನ, ಲಘು ಮಂತ್ರ ಮುದ್ರೆಗಳು, ಸೂರ್ಯ ನಮಸ್ಕಾರ ಇತ್ಯಾದಿಗಳನ್ನು ಕಲಿಸಿ ಕೊಡಲಾಯಿತು. ದೇಲಂಪಾಡಿಯವರ ಶಿಷ್ಯರಾದ ಸ್ಕಂದಾ, ಜ್ಯೋತಿ, ಸುಮಾ, ಭಾರತೀ, ಶ್ವೇತಾ ಇವರು ಸಹಕರಿಸಿದರು. ಈ ಸಂದರ್ಭ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರನ್ನು ಗೌರವಿಸಲಾಯಿತು.