ಪುತ್ತೂರು ಘಟಕದ ಹಿರಿಯ ಗೃಹರಕ್ಷಕ ಜಗನ್ನಾಥ ಪಿ. ಇವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

mng--3 Feb Jaganatha
Published on

ಮಂಗಳೂರು: ಪುತ್ತೂರು ಘಟಕದ ಹಿರಿಯ ಗೃಹರಕ್ಷಕ ಜಗನ್ನಾಥ ಪಿ. ಅವರಿಗೆ 2023ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.


ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಅವರು ಶಿಫಾರಸ್ಸು ಮಾಡಿ ಕಳುಹಿಸಿದ್ದರು. ಜಗನ್ನಾಥ ಅವರು 2000 ಇಸವಿಯಲ್ಲಿ ಇಲಾಖೆಗೆ ಸೇರಿ ಸುಮಾರು 24 ವರ್ಷಗಳ ಕಾಲ ನಿಷ್ಕಾಮ ಸೇವೆ ಸಲ್ಲಿಸಿದ್ದಾರೆ. ಚುನಾವಣಾ ಬಂದೋಬಸ್ತ್, ಸಂಚಾರ ನಿರ್ವಹಣೆ, ಪ್ರಕೃತಿ ವಿಕೋಪ ನಿರ್ವಹಣೆ, ಪರಿಸರ ಸಂರಕ್ಷಣೆ ಮೊದಲಾದ ಕೆಲಸ ಕಾರ್ಯಗಳನ್ನು ಪ್ರಾಮಾಣಿಕತೆಯಿಂದ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net