ವಿದೇಶದಿಂದ ವಕೀಲರಿಗೆ ಹಣಕ್ಕಾಗಿ ಕರೆ, ಜೀವ ಬೆದರಿಕೆ - ನಗರ ಠಾಣೆಯಲ್ಲಿ ಪ್ರಕರಣ

Crime Logo
Published on

ಪುತ್ತೂರು: ವಕೀಲರೊಬ್ಬರಿಗೆ ವಿದೇಶದಿಂದ ಹಣಕ್ಕಾಗಿ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ ಬಗ್ಗೆ ನ್ಯಾಯಾಲಯದಲ್ಲಿ ಖಾಸಗೀ ಪ್ರಕರಣ ದಾಖಲಿಸಿದ್ದು, ಈಗ ಪೊಲೀಸರಿಗೆ ಮೊಕದ್ದಮೆ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಪುತ್ತೂರು ವಕೀಲ ಪ್ರಶಾಂತ್ ಪಿ. ರೈ ಎಂಬವರಿಗೆ ಕೆಲವು ತಿಂಗಳ ಹಿಂದೆ ವಿದೇಶದಿಂದ ಕರೆ ಬಂದಿದ್ದು, ಭೂಗತ ಪಾತಕಿ ಜಗ್ಗು ಶೆಟ್ಟಿ ಎಂದು ಪರಿಚಿಸಿಕೊಂಡ ವ್ಯಕ್ತಿ 25ಲಕ್ಷ ಬೇಡಿಕೆಯಿಟ್ಟಿದ್ದಾರೆ. ಬಳಿಕ ನ್ಯಾಯಾಲಯದ ಸಮೀಪ ಇಬ್ಬರು ವ್ಯಕ್ತಿಗಳು ಬಂದು ಬಾಸ್ ಆದೇಶದಂತೆ ಹಣ ನೀಡದೇ ಹೋದಲ್ಲಿ ಕೊಲೆ ಮಾಡುವಂತೆ ಸೂಚಿಸಿರುವುದಾಗಿ ತಿಳಿಸಿದ ಬಗ್ಗೆ ಪ್ರಕರಣದಲ್ಲಿ ಹೇಳಿದ್ದರು. ನ್ಯಾಯಾಲಯದ ಆದೇಶದ ಪ್ರಕಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net