ಜಲಮೂಲ ಸೇರುವ ತ್ಯಾಜ್ಯಕ್ಕೆ ಬ್ರೇಕ್ PUTTUR

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿ ಹರಿಯುವ ರಾಜಕಾಲುವೆಯಲ್ಲಿ ಅಳವಡಿಸಲಾದ ಟ್ರ್ಯಾಶ್ ಬ್ಯಾರಿಯರ್.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿ ಹರಿಯುವ ರಾಜಕಾಲುವೆಯಲ್ಲಿ ಅಳವಡಿಸಲಾದ ಟ್ರ್ಯಾಶ್ ಬ್ಯಾರಿಯರ್.
Published on

ಪ್ರಮುಖ ಮುಖ್ಯಾಂಶಗಳು

  • ಪುತ್ತೂರು ನಗರಸಭೆಯಿಂದ ನೂತನ ತಂತ್ರಜ್ಞಾನ ‘ಟ್ರ್ಯಾಶ್ ಬ್ಯಾರಿಯರ್’ ಅಳವಡಿಕೆ
  • ಸಿಎಸ್‌ಆರ್ ಅನುದಾನದಲ್ಲಿ ಸ್ವಚ್ಛ ಪುತ್ತೂರು ಸಾಕಾರಕ್ಕೆ ಮತ್ತೊಂದು ಹೆಜ್ಜೆ
ಪುತ್ತೂರು: ಪ್ಲಾಸ್ಟಿಕ್ ತ್ಯಾಜ್ಯಗಳು ನೀರಿನ ಮೂಲಗಳನ್ನು ಸೇರಿ ಜಲಚರಗಳಿಗೆ ಕಂಟಕವಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಪುತ್ತೂರು ನಗರ ಸಭೆ ಖಾಸಗಿ ಸಹಭಾಗಿತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ರಾಜಕಾಲುವೆಗೆ ಟ್ರ್ಯಾಶ್ ಬ್ಯಾರಿಯರ್ ತಂತ್ರಜ್ಞಾನವನ್ನು ಅಳವಡಿಸಿದೆ.
ಪುತ್ತೂರಿನ ತೆಂಕಿಲ ಭಾಗದಿಂದ ಪ್ರಾರಂಭವಾಗುವ ಈ ರಾಜಕಾಲುವೆ ಬೆದ್ರಾಳದಲ್ಲಿ ನದಿಯನ್ನು ಸೇರುತ್ತದೆ. ಪುತ್ತೂರು ಪೇಟೆಯ ಸಮಗ್ರ ತ್ಯಾಜ್ಯವನ್ನು ಹೊತ್ತೊಯ್ದು ಅಣೆಕಟ್ಟುಗಳಲ್ಲಿ ಕುಡಿಯುವ ನೀರಿನ ಮೂಲಗಳನ್ನು ಸೇರಿ ಜಲಮಾಲಿನ್ಯ ಉಂಟಾಗುತ್ತಿತ್ತು. ಈ ಹೊಸ ತಂತ್ರeನವು ತೇಲುವ ಕಸವನ್ನು ಮೂಲದಲ್ಲೇ ತಡೆದು ನೀರಿನಿಂದ ಬೇರ್ಪಡಿಸಲು ಸಹಕಾರಿಯಾಗಿದೆ.
ಉಪಯೋಗ ಹೇಗೆ?: ಟ್ರ್ಯಾಶ್ ಬ್ಯಾರಿಯರ್ ನೀರಿನ ಮೇಲೆ ತೇಲುವ ಕಸ-ಕಡ್ಡಿ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ನೀರಲ್ಲಿ ಹರಿದು ಹೋಗದಂತೆ ತಡೆಯುತ್ತದೆ. ಇದನ್ನು ಕೆರೆ, ಹಳ್ಳ, ನದಿ ಮತ್ತು ಸಮುದ್ರದಂತಹ ನೀರಿನ ಹರಿವು ಇರುವ ಪ್ರದೇಶದಲ್ಲಿ ಬಳಸಲಾಗುತ್ತದೆ. ಬೆಂಗಳೂರು, ಮೈಸೂರು ಭಾಗದಲ್ಲಿದ್ದ ತಂತ್ರeನ ಪುತ್ತೂರಿಗೆ ಆಗಮಿಸಿದ್ದು, ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರೆ ಸ್ವಚ್ಛ ಪುತ್ತೂರಿನ ಕಲ್ಪನೆ ಸಾಕಾರಗೊಳ್ಳುವುದರಲ್ಲಿ ಅನುಮಾನವಿಲ್ಲ.
ಜಲಮಾಲಿನ್ಯಕ್ಕೆ ತಡೆ: ನೀರಿನಲ್ಲಿ ತೇಲುವ ಕಸಗಳಾದ ಪ್ಲಾಸ್ಟಿಕ್ ಬಾಟಲಿ, ಬ್ಯಾಗ್ ಸೇರಿದಂತೆ ವಿವಿಧ ರೀತಿಯ ಪರಿಸರಕ್ಕೆ ಮಾರಕವಾದ ತ್ಯಾಜ್ಯವನ್ನು ತಡೆ ಹಿಡಿಯುತ್ತದೆ. ಈ ಮೂಲಕ ಹೊಳೆಗಳ ಮೂಲಕ ಸಮುದ್ರ ಸೇರುವ ಕಸಕ್ಕೆ ಮುಕ್ತಿ ಸಿಗಲಿದೆ. ಜಲಮಾಲಿನ್ಯವನ್ನು ಕಡಿಮೆ ಮಾಡುವ ಜತೆಗೆ ಜಲಚರಗಳಿಗೆ ಹಾನಿಯಾಗುವುದು ತಪ್ಪುತ್ತದೆ. ಉಡುಪಿಯಲ್ಲಿ ಹಲವು ವರ್ಷಗಳ ಹಿಂದೆ ಟ್ರ್ಯಾಶ್ ಬ್ಯಾರಿಯರ್ ತಂತ್ರeನ ಅಳವಡಿಸಿದ್ದು ಸುಮಾರು ೫ ಟನ್‌ಗಳಷ್ಟು ಕಸ ಸಂಗ್ರಹವಾಗಿದೆ.

ಎಂಆರ್‌ಎಫ್ ಘಟಕದಲ್ಲಿ ನಿರ್ವಹಣೆ

ಮಳೆಗಾಲ ಆರಂಭವಾಗುತ್ತಿದ್ದಂತೆ ಚರಂಡಿಗಳಲ್ಲಿ ತುಂಬಿದ್ದು ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ ತೋಡುಗಳನ್ನು ಸೇರುತ್ತಿತ್ತು. ಈ ತಂತ್ರeನ ಅಳವಡಿಕೆಯ ನಂತರ ನೂರಾರು ಪ್ಲಾಸ್ಟಿಕ್ ಬಾಟಲಿಗಳು ಇದರಲ್ಲಿ ಸಿಲುಕಿವೆ. ಸಾಹಸ್ ಸಂಸ್ಥೆ ಈ ತ್ಯಾಜ್ಯಗಳನ್ನು ತೆರವುಗೊಳಿಸಿ ಶುಚಿಮಾಡುತ್ತಿದೆ. ಸಂಗ್ರಹವಾದ ತ್ಯಾಜ್ಯವನ್ನು ಎಂಆರ್‌ಎ- ಘಟಕದ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.

ಸ್ವಚ್ಛ ಪುತ್ತೂರು ಪರಿಕಲ್ಪನೆ

ಬೆಂಗಳೂರು ಮೂಲದ ಸಾಹಸ್ ಎನ್‌ಜಿಒ ಸಂಸ್ಥೆಯ ಪಂಚಸಿರಿ ಕಾರ್ಯಕ್ರಮದಡಿ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಟ್ರ್ಯಾಶ್ ಬ್ಯಾರಿಯರ್ ಅಳವಡಿಸುತ್ತಿದೆ. ಸ್ವಚ್ಛ ಪುತ್ತೂರು ಪರಿಕಲ್ಪನೆಯ ದೃಷ್ಟಿಯಿಂದ ಎಚ್‌ಡಿಬಿ -ನಾನ್ಶಿಯಲ್ ಸರ್ವಿಸ್‌ನ ೫ ಲಕ್ಷ ರೂ. ಸಿಎಸ್‌ಆರ್ ಅನುದಾನದಲ್ಲಿ ತಂತ್ರeನ ಅಳವಡಿಸಲಾಗಿದೆ. ಮುಂದಿನ ನಿರ್ವಹಣೆಯನ್ನು ಪುತ್ತೂರು ನಗರಸಭೆ ಮಾಡಲಿದೆ.
"

ಎನ್‌ಜಿಒ ಸಾಹಸ್ ಸಂಸ್ಥೆಯ ಮೂಲಕ ನೀರಿನಲ್ಲಿ ಹರಿದು ಹೋಗುವ ತ್ಯಾಜ್ಯ ತಡೆಗೆ ಟ್ರ್ಯಾಶ್ ಬ್ಯಾರಿಯರ್ ಅಳವಡಿಸಲಾಗಿದೆ. ಪ್ರಾಯೋಗಿಕವಾಗಿ ಬೆದ್ರಾಳದಲ್ಲಿ ಹಾಕಲಾಗಿತ್ತು. ಖಾಸಗಿ ಜಾಗದವರಿಂದ ತಕರಾರು ಬಂದ ಹಿನ್ನೆಲೆಯಲ್ಲಿ ದೇವಸ್ಥಾನದ ಬಳಿ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ೪ರಿಂದ ೫ ಕಡೆ ಈ ತಂತ್ರಜ್ಞಾನವನ್ನು ಅಳವಡಿಸುವ ಗುರಿ ಇದೆ.

— ವಿದ್ಯಾ ಕಾಳೆ, ನಗರಸಭೆ ಪೌರಾಯುಕ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net