

ವಿಟ್ಲ: ಬ್ಯಾಂಕಿಂಗ್ ವ್ಯವಸ್ಥೆಯನ್ನು ಸರಿಯಾಗಿ ಉಪಯೋಗಿಸಿದಾಗ ಉತ್ತುಂಗಕ್ಕೆ ಏರಬಹುದಾಗಿದೆ. ಕಷ್ಟದಲ್ಲಿರುವವರಿಗೆ ಸಾಲ ನೀಡಿ, ಸಹಕರಿಸುವ ಕೆಲಸ ಬ್ಯಾಂಕಿನಿಂದ ನಡೆಯಬೇಕು. ಸಮಾಜಕ್ಕೆ ಮಾಡಿದ ಉಪಕಾರದಿಂದ ಪ್ರತಿಯೊಬ್ಬರು ನೆನಪಿಡುವ ಕಾರ್ಯವಾಗುತ್ತದೆ. ಕೃಷಿಕರಿಗೆ ಕಷ್ಟದಲ್ಲಿ ಸ್ಪಂದಿಸುವ ಕಾರ್ಯವನ್ನು ಟೌನ್ ಬ್ಯಾಂಕ್ ಮಾಡಿದೆ ಎಂದು ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.
ವಿಟ್ಲ ಎಂಪೈರ್ ಮಾಲ್‌ನಲ್ಲಿ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ನೂತನ ವಿಟ್ಲ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಮಾತನಾಡಿ, ಸಹಕಾರ ಕ್ಷೇತ್ರ ಎದ್ದು ನಿಂತರೆ ದೇಶದಲ್ಲಿ ಬದಲಾವಣೆಯನ್ನು ತರಬಹುದಾಗಿದೆ. ಜಿಡಿಪಿಯಲ್ಲಿ ಶೇ.೨೫ರಷ್ಟು ಸಹಕಾರಿಯ ಕೊಡುಗೆಯಿದೆ. ದೇಶದಲ್ಲಿ ೫೨ ರೀತಿಯ ಸಹಕಾರಿ ಸಂಸ್ಥೆಗಳಿದ್ದು, ೮.೫ಲಕ್ಷದ ಸಂಸ್ಥೆ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರೀಯ ನಿಯಮಾವಳಿಗಳನ್ನು ಡಿಸೆಂಬರ್‌ನಲ್ಲಿ ಜಾರಿಗೆ ತರಲಾಗುತ್ತಿದೆ. ಸರಸ್ವತಿಯಿಂದ ೧ ಕೋಟಿ ಠೇವಣಿ ಕೊಟ್ಟು ಬೆಂಬಲಿಸುವ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೊಳಹಳ್ಳಿ ಶಿವರಾಯರ ಭಾವಚಿತ್ರ ಅನಾವರಣ ಮಾಡಲಾಯಿತು. ಗೋವರ್ಧನ ವಿಟ್ಲ ಅವರಿಗೆ ಪ್ರಥಮ ಠೇವಣಿ ಪತ್ರವನ್ನು ಹಸ್ತಾಂತರ ಮಾಡಲಾಯಿತು. ೨೦೨೫ನೇ ಸಾಲಿನ ಕ್ಯಾಲೆಂಡರಿನ ಬಿಡುಗಡೆ ನಡೆಯಿತು. ಕಟ್ಟಡ ಮಾಲೀಕ ಪೀಟರ್ -ನ್ಸಿನ್ಸ್ ಅವರನ್ನು ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ ವಹಿಸಿದ್ದರು. ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ನಿರ್ದೇಶಕರಾದ ಸದಾಶಿವ ಪೈ, ಕಿರಣ್ ಕುಮಾರ್ ರೈ, ಚಂದ್ರಶೇಖರ ಗೌಡ ಕೆ. ನಾರಾಯಣ ಎ. ಬಿ., ವಿನೋದ್ ಕುಮಾರ್ ಜಿ., ಮಲ್ಲೇಶ್ ಕುಮಾರ್, ಜಯಂತಿ, ಹೇಮಾವತಿ, ವೃತ್ತಿಪರ ನಿರ್ದೇಶಕ ಅರವಿಂದ ಕೃಷ್ಣ ಬಿ. ಮತ್ತಿತರರು ಉಪಸ್ಥಿತರಿದ್ದರು.
ಅದ್ವಿಕಾ ಪ್ರಾರ್ಥಿಸಿದರು. ಉಪಾಧ್ಯಕ್ಷ ಕುಡ್ಗಿ ವಿಶ್ವಾಸ್ ಶೆಣೈ ಸ್ವಾಗತಿಸಿದರು. ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ ಪ್ರಸ್ತಾವನೆಗೈದರು. ಮುಖ್ಯಕಾರ್ಯನಿರ್ವಹಣಾಽಕಾರಿ ಬಿ. ಶೇಖರ ಶೆಟ್ಟಿ ವಂದಿಸಿದರು. ವಿಟ್ಲ ಶಾಖಾ ವ್ಯವಸ್ಥಾಪಕ ಚೇತನ್ ಕಾರ್ಯಕ್ರಮ ನಿರೂಪಿಸಿದರು. ವಿಟ್ಲ ಶಾಖೆಯ ಪವನ್, ಉದಯ ಸಹಕರಿಸಿದರು.
೧೨೦ಕೋಟಿ ರೂ. ಮಿಕ್ಕಿ ವ್ಯವಹಾರವನ್ನು ನಡೆಸಿ ೧.೫೫ ಕೋಟಿ ರೂ. ಲಾಭ ಗಳಿಸಿದೆ. ರಿಸರ್ವ್ ಬ್ಯಾಂಕ್ ನಿಯಮಗಳನ್ನು ಪಾಲಿಸಿಕೊಂಡು, ಅನುಸರಣಾ ವರದಿ ಸಲ್ಲಿಸಿದೆ. ಅನುತ್ಪಾದಕ ಆಸ್ತಿಯನ್ನು ಶೂನ್ಯಕ್ಕೆ ಇಳಿಸುವ ಮೂಲಕ ಬ್ಯಾಂಕ್ ಆರ್ಥಿಕ ಸುದೃಢ ಹಾಗೂ ಉತ್ತಮ ನಿರ್ವಹಣೆ ಬ್ಯಾಂಕ್ ಆಗಿ ಗುರುತಿಸಲ್ಪಟ್ಟಿದೆ. ಆಧುನಿಕತೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಬ್ಯಾಂಕಿನಲ್ಲಿ ಅಳವಡಿಸಲಾಗಿದೆ.
| ಎನ್. ಕಿಶೋರ್ ಕೊಳತ್ತಾಯ
ಅಧ್ಯಕ್ಷರು, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್