ಗುಣಮಟ್ಟದ ಚಿನ್ನಾಭರಣಗಳಿಗೆ ‘ಸುಲ್ತಾನ್‘ ಪ್ರಖ್ಯಾತಿ

sultan
Published on

ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಹೃದಯಕ್ಕೆ ಹತ್ತಿರವಾದ ಸಂಸ್ಥೆ. ಗುಣಮಟ್ಟದ ವಿಚಾರದಲ್ಲಿ ಸುಲ್ತಾನ್ ಒಳ್ಳೆಯ ಕೆಲಸ ನಿರ್ವಹಿಸುತ್ತಿದ್ದು, ಉತ್ತಮ ಸಂಗ್ರಹ ಹೊಂದಿದೆ. ನಿಶ್ಚಿತಾರ್ಥದಲ್ಲಿ ಧರಿಸಿದ ಉಂಗುರಗಳನ್ನು ಒಟ್ಟಿಗೆ ಮಾಡಿ ಆರು ವರ್ಷದಿಂದ ಧರಿಸಿಕೊಂಡು ಬಂದಿದ್ದು, ಇದು ಸುಲ್ತಾನ್‌ನ ಶಕ್ತಿಯಾಗಿದೆ. ಪುತ್ತೂರಿನಲ್ಲಿ ಈಗ ೧೦ನೇ ಶಾಖೆ ಉದ್ಘಾಟನೆಯಾಗಿದ್ದು, ೧೦೦ ಶಾಖೆಗಳನ್ನು ಹೊಂದುವಂತಾಗಲಿ ಎಂದು ಬಹುಭಾಷಾ ನಟಿ ಪ್ರಿಯಾಮಣಿ ಶುಭ ಹಾರೈಸಿದರು.

ಪುತ್ತೂರು ಮುಖ್ಯ ರಸ್ತೆಯ ಏಳ್ಮುಡಿ ಸೇತುವೆ ಬಳಿ ಗುರುವಾರ ವಿಶ್ವಾಸಾರ್ಹ ಆಭರಣ ಬ್ರ್ಯಾಂಡ್ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನ ೧೦ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.

ಮಾಜಿ ಶಾಸಕ ಸಂಜೀವ ಮಠಂದೂರು ಟೆಂಪಲ್ ಕಲೆಕ್ಷನ್ ಸಂಗ್ರಹ ಬಿಡುಗಡೆ ಮಾಡಿ ಮಾತನಾಡಿ, ಮುತ್ತನ್ನು ಬೆಳೆದ ಪುತ್ತೂರು ಇಂದು ಚಿನ್ನದ ನಗರಿಯಾಗಿ ಬೆಳೆದಿದ್ದು, ಸುಲ್ತಾನ್ ಇನ್ನೊಂದು ಗರಿ ಮೂಡಿಸಿದೆ. ಪುತ್ತೂರಿನ ಜನ ಆಭರಣ ಪ್ರಿಯರಾಗಿದ್ದು, ಚಿನ್ನದ ಮಳಿಗೆಗಳನ್ನು ಬೆಳೆಸುವ ಕಾರ್ಯವನ್ನು ಜನ ಮಾಡಿದ್ದಾರೆ. ಜಿಲ್ಲೆಯಲ್ಲಿ ಚಿನ್ನದ ಮಾರುಕಟ್ಟೆ ಕೇಂದ್ರವಾಗಿ ಪುತ್ತೂರು ಬೆಳೆಯುತ್ತಿದೆ ಎಂದರು.

ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಜೆಮ್ ಸ್ಟೋನ್ ಸಂಗ್ರಹ, ಎಸ್‌ಡಿಪಿಐ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ವಜ್ರಾಭರಣ ಸಂಗ್ರಹ, ಮೌಂಟೀಸ್ ವ್ಯೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಪಿ.ಅಹಮದ್ ಹಾಜಿ ಆಕರ್ಷಣ್ ಅರೇಬಿಯನ್ ಚಿನ್ನಾಭರಣ ಸಂಗ್ರಹ, ಸುದಾನ ವಸತಿ ಶಾಲೆಯ ಸಂಚಾಲಕ ವಿಜಯ್ ಹಾರ್ವಿನ್ ಆಂಟಿಕ್ ಚಿನ್ನಾಭರಣ ಸಂಗ್ರಹ, ಲಿಯೋ ಜಿಲ್ಲಾಧ್ಯಕ್ಷೆ ಡಾ.ರಂಜಿತಾ ಎಚ್.ಶೆಟ್ಟಿ ಕಾವು ಚಿನ್ನಾಭರಣಗಳ ಸಂಗ್ರಹವನ್ನು ಅನಾವರಣಗೊಳಿಸಿದರು.

ಸಾಮಾಜಿಕ ಮುಂದಾಳು ಟಿ.ಎಂ.ಸಹೀದ್, ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ವ್ಯವಸ್ಥಾಪಕ ನಿರ್ದೇಶಕ ಡಾ.ಅಬ್ದುಲ್ ರಹೂಫ್, ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಂ.ಅಬ್ದುಲ್ ರಹೀಮ್, ಸುಲ್ತಾನ್ ಗ್ರೂಪ್ ಜಿ.ಎಂ. ಎ.ಕೆ.ಉನ್ನಿಥಾನ್, ಪ್ರಾದೇಶಿಕ ವ್ಯವಸ್ಥಾಪಕ ಸುಮೇಶ್, ಪುತ್ತೂರು ಶಾಖಾ ವ್ಯವಸ್ಥಾಪಕ ಕೆ.ಎಸ್.ಮುಸ್ತಫಾ ಕಕ್ಕಿಂಜೆ, ಮಾರ್ಕೆಟಿಂಗ್ ಮ್ಯಾನೇಜರ್ ಮಹಮ್ಮದ್ ಹಮ್ರಾಜ್ ಮತ್ತಿತರರು ಉಪಸ್ಥಿತರಿದ್ದರು. ಜಹೀರ್ ಕಾರ್ಯಕ್ರಮ ನಿರೂಪಿಸಿದರು.

ಗ್ರಾಹರಿಗೆ ವಿಶೇಷ ಕೊಡುಗೆ
ಪುತ್ತೂರು ಮಳಿಗೆ ಉದ್ಘಾಟನೆ ಅಂಗವಾಗಿ ಗ್ರಾಹಕರಿಗೆ ಆಕರ್ಷಕ ಕೊಡುಗೆ ನೀಡಲಾಗುತ್ತಿದೆ. ಪ್ರತಿದಿನ ಮಧ್ಯಾಹ್ನ 3 ಮತ್ತು ರಾತ್ರಿ 8 ಗಂಟೆಗೆ ಲಕ್ಕಿ ಡ್ರಾ ಮೂಲಕ ಇಬ್ಬರು ಗ್ರಾಹಕರಿಗೆ ತಲಾ ಒಂದು ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅವಕಾಶವಿದೆ. ಎಲ್ಲ ಚಿನ್ನದ ಆಭರಣ ತಯಾರಿ ಶುಲ್ಕದ ಮೇಲೆ ಶೇ.50 ರಿಯಾಯಿತಿ. ಡೈಮಂಡ್ ಪ್ರತಿ ಕ್ಯಾರೆಟ್ ಮೇಲೆ 8 ಸಾವಿರ ರೂ. ರಿಯಾಯಿತಿ. ಹಳೆಯ ಚಿನ್ನದ ವಿನಿಮಿಯದಲ್ಲಿ ಪ್ರತಿ ಗ್ರಾಂಗೆ 50 ರೂ. ಹೆಚ್ಚುವರಿ ಪಡೆಯಬಹುದು. ಬೆಳ್ಳಿ ಆಭರಣಗಳ ತಯಾರಿ ವೆಚ್ಚದ ಮೇಲೆ ಶೇ.25 ಕಡಿತ. ಉದ್ಘಾಟನೆ ಪ್ರಯುಕ್ತ ಕೊಡುಗೆಗಳು ಮಾ.10ರವರೆಗೆ ಗ್ರಾಹಕರಿಗೆ ಲಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net