ಪುತ್ತೂರು: ನಗರದಲ್ಲಿ ವಾರಕ್ಕೆ ಒಂದು ದಿನ ಮೊಕ್ಕಾಂ ಹೂಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಶಾಸಕ ಅಶೋಕ್ ಕುಮಾರ್ ರೈ ಸೂಚನೆ ನೀಡಿದ್ದು, ಇದಕ್ಕೆ ಪೂರಕವಾಗಿ ಸ್ಪಂದಿಸಿದ ಎಸ್. ಪಿ. ವಾರದಲ್ಲಿ ಒಂದು ಉಪವಿಭಾಗ ವ್ಯಾಪ್ತಿಯಲ್ಲಿ ಮೊಕ್ಕಾಂ ಹೂಡಲಿದ್ದಾರೆ.
ಅಪರಾಧ ಚಟುವಟಿಕೆಗೆ ಕಡಿವಾಣ ಹಾಕುವುದು ಮತ್ತು ಸಾರ್ವಜನಿಕರಿಗೆ ಎಸ್ಪಿಯವರನ್ನು ಭೇಟಿಯಾಗಲು ಇದರಿಂದ ಸಾಧ್ಯವಾಗಲಿದೆ. ಪುತ್ತೂರು ಉಪವಿಭಾಗದ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಹಾಗೂ ಕಡಬ ವ್ಯಾಪ್ತಿಗಳ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಎಸ್ಪಿ ಅವರನ್ನು ಪುತ್ತೂರಿನಲ್ಲಿಯೇ ಭೇಟಿಯಾಗಬಹುದಾಗಿದೆ.ಎಸ್ಪಿಯವರನ್ನು ಭೇಟಿಯಾಗಲು ಮಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ಈ ಹಿಂದೆ ಇತ್ತು. ಇಲಾಖೆಯನ್ನು ಚುರುಕುಗೊಳಿಸಲು ಇದು ಸಹಕಾರಿಯಾಗಲಿದೆ.
ಎಸ್ಪಿ ಕಚೇರಿಯನ್ನು ಪುತ್ತೂರಿಗೆ ವರ್ಗಾಯಿಸಬೇಕು ಎಂಬ ಕೂಗಿನ ನಡುವೆ ಶಾಸಕರ ಈ ನಿರ್ಧಾರ ಇನ್ನಷ್ಟು ಬಲ ನೀಡಿದೆ.