ಗುಜರಿ ಹೆಕ್ಕಲು ಬಂದು ಪಂಪ್ ಕದ್ದರು!

crime
Published on

ಪುತ್ತೂರು ಗ್ರಾಮಾಂತರ: ಗುಜರಿ ವಸ್ತು ಖರೀದಿಸುವ ನೆಪದಲ್ಲಿ ಬಂದ ಅಪರಿಚಿತರು ಮನೆಯವರ ಗಮನಕ್ಕೆ ಬಾರದ ರೀತಿಯಲ್ಲಿ ಪಂಪ್ ಸಹಿತ ಕೃಷಿ ಉಪಕರಣಗಳನ್ನು ದೋಚಿದ ಘಟನೆ ಸರ್ವೆ ಗ್ರಾಮದ ಸೊರಕೆ ವ್ಯಾಪ್ತಿಯಲ್ಲಿ ನಡೆದಿದೆ.


ಸರ್ವೆ ಗ್ರಾಮದ ಸೊರಕೆ ನಿವಾಸಿ ಅಬ್ಬಾಸ್ ಎಂಬುವರ ಮನೆಗೆ ಆಟೋದಲ್ಲಿ ಬಂದ ಮೂವರು ಅಪರಿಚಿತರು, ಗುಜರಿ ಸಾಮಗ್ರಿಗಳು ಇದೆಯೇ ಎಂದು ಕೇಳಿದ್ದರು. ಮನೆಯವರು ಇಲ್ಲ ಎಂದು ಹೇಳಿದ ಬಳಿಕವೂ ಇಬ್ಬರು ಗುಜರಿ ವಸ್ತು ಹೆಕ್ಕುವ ನೆಪದಲ್ಲಿ ಮನೆಯ ವಠಾರದಲ್ಲಿ ಸುತ್ತಾಡಿ ತೆರಳಿದ್ದರು. ನಂತರ ಮನೆಯವರು ನೋಡಿದಾಗ ಮನೆ ಮುಂಭಾಗ ಇದ್ದ ಪಂಪ್ ಕಾಣೆಯಾಗಿತ್ತು.


ಹೊಸ ಮನೆಯ ಪಕ್ಕದಲ್ಲಿಯೇ ಅಬ್ಬಾಸ್ ಅವರ ಹಳೇ ಮನೆಯೊಂದಿದ್ದು, ಅಲ್ಲಿಗೆ ಹೋಗಿ ನೋಡಿದಾಗ ಹಾರೆ, ಪಿಕ್ಕಾಸು, ಬಕೆಟ್ ಮತ್ತಿತರ ವಸ್ತುಗಳು ಕಾಣೆಯಾಗಿತ್ತು. ಸೊರಕೆಯ ಉಮ್ಮರ್ ಎಂಬುವರ ಮನೆಯ ಬಳಿಯಿದ್ದ ಹಳೇ ಫ್ರಿಡ್ಜ್‌ನ ಒಳಭಾಗದ ಕೆಲವೊಂದು ವಸ್ತುಗಳನ್ನು ಕೂಡ ಗುಜರಿ ಹೆಕ್ಕುವ ನೆಪದಲ್ಲಿ ಬಂದ ಅವರಿಚಿತರು ಕೊಂಡೊಯ್ದಿರುವುದು ತಿಳಿದು ಬಂದಿದೆ. ಸಂಪ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net