ಬಿ.ಟಿ.ರಂಜನ್‌ ಸ್ಮರಣಾರ್ಥ ವಾರ್ಷಿಕ ಪ್ರಶಸ್ತಿ PUTTUR

ಬಿ.ಟಿ.ರಂಜನ್‌
ಬಿ.ಟಿ.ರಂಜನ್‌
Published on

ಪ್ರಮುಖ ಮುಖ್ಯಾಂಶಗಳು

  • ಅತ್ಯುತ್ತಮ ಪತ್ರಿಕಾ ವರದಿಗಳ ಆಹ್ವಾನ
ಪುತ್ತೂರು: ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ ಬಿ.ಟಿ.ರಂಜನ್‌ ಅವರ ಸ್ಮರಣೆಯಲ್ಲಿ ಜು.18ರಂದು ಪುತ್ತೂರು ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅತ್ಯುತ್ತಮ ಪತ್ರಿಕಾ ವರದಿಗೆ ಈ ವರ್ಷದಿಂದ ವಾರ್ಷಿಕ ಪ್ರಶಸ್ತಿ ನೀಡಲು ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನಿರ್ಧರಿಸಿದ್ದು, ಅರ್ಜಿಗಳನ್ನು ಆಹ್ವಾನಿಸಿದೆ.
ಪುತ್ತೂರು, ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕು ಸೇರಿದ ಪುತ್ತೂರು ಉಪ ವಿಭಾಗ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಯನಿರತ ಪತ್ರಕರ್ತರ 2025ರ ಜನವರಿ 1ರಿಂದ ಡಿಸೆಂಬರ್‌ 31ರ ಅವಧಿಯಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅತ್ಯುತ್ತಮ ಮಾನವಾಸಕ್ತಿ ವರದಿಗಳನ್ನು ಆಯ್ಕೆ ಮಾಡಿ ಓರ್ವ ವರದಿಗಾರನಿಗೆ ಬಿ.ಟಿ.ರಂಜನ್‌ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ನಾಲ್ಕು ತಾಲೂಕುಗಳ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ಆಯಾ ತಾಲೂಕುಗಳ ಕಾರ್ಯನಿರತ ಪತ್ರಕರ್ತರು ಅರ್ಜಿ ಸಲ್ಲಿಸಬಹುದಾಗಿದೆ. ಬೈಲೈನ್‌ ಹೊಂದಿರುವ ಮಾನವಾಸಕ್ತಿಯ ವರದಿಗಳ 2 ಪ್ರತಿಗಳನ್ನು ವರದಿಗಾರರು ತಮ್ಮ ತಾಲೂಕು ಸಂಘದ ದೃಢೀಕರಣ ಪತ್ರದೊಂದಿಗೆ ಜು. 11ರ ಒಳಗೆ ಅಧ್ಯಕ್ಷರು, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲುಜೆ ಘಟಕ), ಪತ್ರಿಕಾ ಭವನ, ಪುತ್ತೂರು ಇಲ್ಲಿಗೆ ಕಳುಹಿಸಬೇಕು ಎಂದು ಪುತ್ತೂರು ತಾಲೂಕು ಕಾರ್ಯನಿರತ ಪತ್ರಿಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ, ಪ್ರಧಾನ ಕಾರ್ಯದರ್ಶಿ ಸಿ.ಶೇ.ಕಜೆಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net