

ಮಂಗಳೂರು: ಪುತ್ತೂರಿನಲ್ಲಿ ಗುರುವಾರ ಬೆಳಗ್ಗೆ ಅಕಾಲಿಕ ಮಳೆ ಸುರಿದು ಜನರಲ್ಲಿ ಅಚ್ಚರಿ ಮೂಡಿಸಿದೆ.
ಪುತ್ತೂರು ತಾಲೂಕಿನಲ್ಲಿ ಬೆಳಗ್ಗೆ 5.30ರಲ್ಲಿ ಆರಂಭವಾದ ಮಳೆ ಒಂದು ತಾಸು ಸುರಿಯಿತು. ವಿಟ್ಲದಲ್ಲಿ ಜೋರು ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.
ಫೆಬ್ರವರಿ ಕೊನೇ ವಾರದಲ್ಲಿ ಮಳೆ ಸುರಿದ ಮಾಹಿತಿ ಇಲ್ಲ. ಹೀಗಾಗಿ ಅಕಾಲಿಕ ಮಳೆ ಸುರಿದಿದೆ. ಮಾರ್ಚ್ ಏಪ್ರಿಲ್ನಲ್ಲಿ ಮಳೆ ಸುರಿಯವುದು ವಾಡಿಕೆ. ಹೀಗಾಗಿ ಗುರುವಾರ ಸುರಿದಿರುವ ಮಳೆ ಅಕಾಲಿಕ ಎಂಬ ಚರ್ಚೆ ನಡೆಯುತ್ತಿದೆ.
ಮಳೆಗೆ ಚರಂಡಿಗಳು ತುಂಬಿ ಹರಿದಿವೆ. (ದಿಗ್ವಿಜಯ ನ್ಯೂಸ್)