ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು PUTTUR

ರಾಜ್ಯದ ಸಿವಿಲ್‌ ಪೊಲೀಸ್‌ ಕಾನ್‌ಸ್ಟೇಬಲ್‌ ಹಾಗೂ ಮೀಸಲು ಪೊಲೀಸ್‌ ಹುದ್ದೆಗೆ ಅರ್ಜಿ ಹಾಕಿದ ಅಭ್ಯರ್ಥಿಗಳ ಉಚಿತ ತರಬೇತಿ ಕಾರ್ಯಾಗಾರವನ್ನು ಶಾಸಕ ಅಶೋಕ್‌ ಕುಮಾರ್‌ ರೈ ಉದ್ಘಾಟಿಸಿದರು. ಪ್ರಮೋದ್‌ ಕುಮಾರ್‌, ಈಶ್ವರ ಭಟ್‌, ಜಾನ್ಸನ್‌ ಡಿಸೋಜ ಇದ್ದರು.
ರಾಜ್ಯದ ಸಿವಿಲ್‌ ಪೊಲೀಸ್‌ ಕಾನ್‌ಸ್ಟೇಬಲ್‌ ಹಾಗೂ ಮೀಸಲು ಪೊಲೀಸ್‌ ಹುದ್ದೆಗೆ ಅರ್ಜಿ ಹಾಕಿದ ಅಭ್ಯರ್ಥಿಗಳ ಉಚಿತ ತರಬೇತಿ ಕಾರ್ಯಾಗಾರವನ್ನು ಶಾಸಕ ಅಶೋಕ್‌ ಕುಮಾರ್‌ ರೈ ಉದ್ಘಾಟಿಸಿದರು. ಪ್ರಮೋದ್‌ ಕುಮಾರ್‌, ಈಶ್ವರ ಭಟ್‌, ಜಾನ್ಸನ್‌ ಡಿಸೋಜ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪ ಅಧೀಕ್ಷಕ ಪ್ರಮೋದ್‌ ಕುಮಾರ್‌ ಅಭಿಮತ
  • ಉಚಿತ ತರಬೇತಿ ಕಾರ್ಯಾಗಾರ
ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಠಿಣ ಪರಿಶ್ರಮ ಅಗತ್ಯವಾಗಿದ್ದು, ಆತ್ಮವಿಶ್ವಾಸ, ದೃಢನಿರ್ಧಾರ ಇದ್ದಾಗ ಮಾತ್ರ ಯಶಸ್ಸುಗಳಿಸುವುದು ಸಾಧ್ಯವಾಗುತ್ತದೆ. ಸ್ಥಳೀಯ ಅಭ್ಯರ್ಥಿಗಳು ಪೊಲೀಸ್‌ ಇಲಾಖೆಗೆ ಸೇರಿದಾಗ ಸ್ಥಳೀಯ ಜನರೊಂದಿಗೆ ಬೆರೆತು ಶಾಂತಿಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯು ಸ್ಥಳೀಯ ಅಭ್ಯರ್ಥಿಗಳ ಕುರಿತು ಹೆಚ್ಚಿನ ಒಲವು ಹೊಂದಿದೆ ಎಂದು ಪುತ್ತೂರು ಉಪವಿಭಾಗದ ಪೊಲೀಸ್‌ ಉಪ ಅಧೀಕ್ಷಕ ಪ್ರಮೋದ್‌ ಕುಮಾರ್‌ ಹೇಳಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ಸಭಾಭವನದಲ್ಲಿ ರೈ ಎಸ್ಟೇಟ್ಸ್‌ ಎಜುಕೇಶನಲ್‌ ಆ್ಯಡ್‌ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ರಾಜ್ಯದ ಸಿವಿಲ್‌ ಪೊಲೀಸ್‌ ಕಾನ್‌ಸ್ಟೇಬಲ್‌ ಹಾಗೂ ಮೀಸಲು ಪೊಲೀಸ್‌ ಹುದ್ದೆಗೆ ಅರ್ಜಿ ಹಾಕಿದ ಅಭ್ಯರ್ಥಿಗಳಿಗೆ ಆಯೋಜಿಸಿದ್ದ ಉಚಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಶಾಸಕ ಅಶೋಕ್‌ ಕುಮಾರ್‌ ರೈ ಕಾರ್ಯಾಗಾರ ಉದ್ಘಾಟಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್‌ ಪಂಜಿಗುಡ್ಡೆ, ಪುತ್ತೂರು ನಗರ ಠಾಣೆ ಪೊಲೀಸ್‌ ನಿರೀಕ್ಷಕ ಜಾನ್ಸನ್‌ ಡಿಸೋಜ, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಪ್ರಸಾದ್‌ ಆಳ್ವ, ವಿಟ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ತರಬೇತುದಾರರಾದ ಹರೀಶ್‌ ಶೆಟ್ಟಿ, ಗಿರೀಶ್‌ ಶೆಟ್ಟಿ ಉಪಸ್ಥಿತರಿದ್ದರು.
ಟ್ರಸ್ಟ್‌ ಕಾರ್ಯಾಧ್ಯಕ್ಷ ಸುದೇಶ್‌ ಶೆಟ್ಟಿ ಸ್ವಾಗತಿಸಿದರು. ಪುಡಾ ಸದಸ್ಯ ನಿಹಾಲ್‌ ಶೆಟ್ಟಿ ವಂದಿಸಿದರು. ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್‌ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು. 500ಕ್ಕೂ ಅ˜ಕ ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
"

ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಲಿದ್ದು ಆರ್ಥಿಕ ಅನುಮೋದನೆ ಪಡೆಯಲಾಗಿದೆ. 570 ಭೂಮಾಪಕರು, 505 ಗ್ರಾಮ ಆಡಳಿತ ಅ˜ಕಾರಿಗಳು, ವಸತಿ ಶಾಲೆಗಳ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಸರ್ಕಾರಿ ಕೆಲಸ ಸಿಗುವುದು ಹಣ, ಪ್ರಭಾವ ಇದ್ದವರಿಗೆ ಮಾತ್ರ. ಅದಕ್ಕಾಗಿ ಪ್ರಯತ್ನಿಸುವುದು ವ್ಯರ್ಥ ಎಂಬ ತಪ್ಪು ಕಲ್ಪನೆಯಿಂದ ಹೊರ ಬರಬೇಕು.

— ಅಶೋಕ್‌ ಕುಮಾರ್‌ ರೈ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net