ಜನಪರ ಕಾಳಜಿ ಇಲ್ಲದ ಬಿಜೆಪಿ - ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಆರೋಪ

IMG-20240704-WA0008
Published on


ಪುತ್ತೂರು: ಸುಳ್ಳು ಮತ್ತು ಅಪಪ್ರಚಾರದ ಮೂಲಕ ವಿರೋಧ ಪಕ್ಷಗಳನ್ನು ಅವಹೇಳನ ಮಾಡಿ, ಅಽಕಾರಕ್ಕೆ ಏರುವ, ಕಳಪೆ ಕಾಮಗಾರಿಗಳನ್ನು ನಡೆಸಿ ಅಭಿವೃದ್ಧಿ ಕಾರ್ಯ ಮಾಡಿದಂತೆ ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ದಿಲ್ಲಿಯಿಂದ ಹಳ್ಳಿಯವರೆಗೆ ಬಿಜೆಪಿ ನಾಯಕರವರೆಗೆ ಜನಪರವಾದ ಯಾವ ಕಾಳಜಿಯೂ ಇಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಅಽಕಾರಕ್ಕೆ ಬಂದ ಬಳಿಕ ಹಾಲಿನ ಉತ್ಪಾದನೆ ಹೆಚ್ಚಾಗಿದ್ದು, ರಾಜ್ಯದ ಹೈನುಗಾರರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಹಾಲಿನ ಪ್ಯಾಕೆಟ್‌ನಲ್ಲಿ ಹೆಚ್ಚಿನ ಹಾಲು ನೀಡಿ ದರ ಏರಿಸಲಾಗಿದೆ. ಹಾಲಿನ ಸಹಾಯ ಧನ ಸರಿಯಾಗಿ ರೈತರಿಗೆ ತಲುಪುತ್ತಿದೆ ಎಂದು ಕೆ.ಪಿ.ಸಿ.ಸಿ ವಕ್ತಾರ ಅಮಳ ರಾಮಚಂದ್ರ ಹೇಳಿದರು.


ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳ ಬೆಲೆ ಏರಿಕೆಯಾಗಿದೆ ಎಂದು ಪ್ರತಿಭಟನೆಗೆ ಕುಳಿತ ಬಿಜೆಪಿಯವರು ೭೦ ರೂ. ಇದ್ದ ಪೆಟ್ರೋಲ್ ದರವನ್ನು ಕೇಂದ್ರದ ಸರ್ಕಾರ ೧೧೦ ರೂ.ಗೆ ಏರಿಸಿದಾಗ ಪ್ರತಿಭಟನೆ ಮಾಡಬೇಕಾಗಿತ್ತು. ಅಡುಗೆ ಅನಿಲದ ಸಿಲಿಂಡರ್ ಬೆಲೆ ೬೦೦ರಿಂದ ೧೨೦೦ ರೂಪಾಯಿ ಆದಾಗ ಮಾತನಾಡದವರು ಪೆಟ್ರೋಲಿನ ಬೆಲೆ ೧೦೩ ರೂ. ಆದಾಗ ಪ್ರತಿಭಟಿಸುತ್ತಿರುವುದು ನಾಟಕವಲ್ಲದೆ ಬೇರೇನೂ ಅಲ್ಲ. ನ್ಯಾಯ ಬದ್ಧ ಜಿಎಸ್‌ಟಿ ಪಾಲು ಕೊಡುವಲ್ಲಿ ತಾರತಮ್ಯ ಮಾಡಿ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಹಣದ ಕೊರತೆಯುಂಟಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಬೇಕೆಂಬ ಕುತಂತ್ರ ನಡೆಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.


ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಯಾಕೂಬ್ ಮುಲಾರ್, ಮೌರಿಸ್ ಮಸ್ಕರೇನ್ಹಸ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಉಮಾನಾಥ ಶೆಟ್ಟಿ, ಕೃಷ್ಣಪ್ರಸಾದ್ ಆಳ್ವ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net