ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಎಂಟು ಜನ ಸೇರಿ ಇಷ್ಟು ದೊಡ್ಡ ಪ್ರಮಾಣದ ಲೂಟಿಯನ್ನು ನಡೆಸುವುದಕ್ಕೆ ಸಾಧ್ಯವಿಲ್ಲ. ಪರದೆಯ ಹಿಂದೆ ಪರಿವಾರದ ದೊಡ್ಡ ದೊಡ್ಡವರು ಶಾಮೀಲಾಗಿದ್ದಾರೆ. ಎಸ್‌ಐಟಿ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ. ಅಯೋಧ್ಯೆಯ ರಾಮ ಮಂದಿರದ ಹುಂಡಿ ಕಳವು ಪ್ರಕರಣದ ತನಿಖೆ ಸಮಗ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆದು, ಲೂಟಿಯ ಸೂತ್ರದಾರರನ್ನು ಕಾನೂನಿನ ಕೈಗೆ ಒಪ್ಪಿಸಿ, ರಾಮನನ್ನೂ, ರಾಮ ಮಂದಿರವನ್ನೂ ಲೂಟಿಕೋರರಿಂದ ರಕ್ಷಿಸಬೇಕು ಎಂದು ಆಗ್ರಹಿಸಿದರು.