ಕುತೂಹಲ ಮೂಡಿಸಿದ ಡಾ. ಭಂಡಾರಿ - ಸತ್ಯಜಿತ್ ಬೇಟಿ..!

IMG-20240209-WA0053
Published on

ಪುತ್ತೂರು: ಮನೀಶ ಸಭಾಭವನದಲ್ಲಿ ಮಂಗಳೂರಿನ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಸತ್ಯಜಿತ್ ಸುರತ್ಕಲ್ ಸಮಾಲೋಚನಾ ಸಭೆ ಕರೆದಿದ್ದರು.

ಸಭೆಯ ನಂತರ ಪುತ್ತೂರಿನ ಹಿರಿಯ ಹಿಂದೂ ಮುಖಂಡ ಡಾ. ಪ್ರಸಾದ್ ಭಂಡಾರಿ ಕರೆಯ ಮೇರೆಗೆ ಅವರ ಮನೆಯಲ್ಲಿ ಮಾತುಕತೆ ನಡೆಸಿದ್ದಾರೆಂಬ ಮಾಹಿತಿ ಸತ್ಯಜಿತ್ ಆಪ್ತ ವಲಯದಲ್ಲಿ ಕೇಳಿ ಬಂದಿದೆ.

ಪ್ರಸಾದ್ ಭಂಡಾರಿ ಕರೆಯ ಮೇರೆಗೆ ಬೊಳುವಾರಿನ ಮನೆಗೆ ತೆರಳಿದ ಸತ್ಯಜಿತ್ ಸುರತ್ಕಲ್ ಮಾತುಕತೆ ನಡೆಸಿದರು. ಈ ಪೋಟೋ ವೈರಲ್ ಆಗಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಕಣ ರಂಗೇರುತ್ತಿರುವಾಗ ಈ ಭೇಟಿ ಬಾರಿ ಕುತೂಹಲಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net