ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಪುಲ ಉದ್ಯೋಗವಕಾಶ - ಪ್ರಾಂಶುಪಾಲ ಆಂಟನಿ ಪ್ರಕಾಶ್ ಮೊಂತೇರೊ ಕಿವಿಮಾತು

PTR_25 MAY_1
Published on

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ಸಂಘ,ಟ್ರೈನಿಂಗ್ ಆಂಡ್ ಪ್ಲೇಸ್ಮೆಂಟ್ ಸೆಲ್ ಹಾಗೂ ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್‌ನ ಪುತ್ತೂರು ಲೀಜನ್‌ಗಳ ಸಹಯೋಗದಲ್ಲಿ ಕಾಲೇಜಿನ ಸ್ನಾತಕೋತ್ತರ ಸಭಾಭವನದಲ್ಲಿ ’ಎಅನ್ ಲಾಕಿಂಗ್ ದ ಪಾಥ್ : ನ್ಯಾವಿಗೇಟಿಂಗ್ ಕರಿಯರ್ ಇನ್ ಬ್ಯಾಂಕಿಂಗ್ ಸೆಕ್ಟರ್’ ಎಂಬ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.


ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಬ್ಯಾಂಕಿಂಗ್ ಬಹಳಷ್ಟು ಉದ್ಯೋಗಾವಕಾಶಗಳಿರುವ ಕ್ಷೇತ್ರ. ಬ್ಯಾಂಕಿಂಗ್ ಕ್ಷೇತ್ರ ಜಾಗತಿಕ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯ ಮೂಲಾಧಾರವಾಗಿ ನಿಂತಿದೆ. ಬ್ಯಾಂಕಿಂಗ್ ಪ್ರಪಂಚದ ಒಳಹೊರಗುಗಳನ್ನು ಸೂಕ್ಷ್ಮಗಳನ್ನು ಅರಿತು ವೃತ್ತಿಜೀವನದಲ್ಲಿ ಸ್ಪರ್ಧಾತ್ಮಕವಾಗಿ ಮತ್ತು ಚುರುಕಾಗಿ ಉಳಿಯಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ವೃತ್ತಿಪರ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ತಜ್ಞರಿಂದ ಪಡೆಯುವ ಜ್ಞಾನ ಮತ್ತು ಮಾರ್ಗದರ್ಶನ ಅಮೂಲ್ಯ ಎಂದರು.

ಬ್ಯಾಂಕ್ ಆಫ್ ಬರೋಡಾ ಪುತ್ತೂರು ಪ್ರದೇಶದ ಯೋಜನಾಽಕಾರಿ ಪ್ರಶಾಂತ ಎಸ್ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಽಸಿದ ವಿದ್ಯಾರ್ಥಿಗಳಿಗೆ ವೃತ್ತಿಜೀವನದ ಮಾರ್ಗದರ್ಶನ ನೀಡಿದರು. ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್‌ನ ಪುತ್ತೂರು ಲೀಜನ್ ಅಧ್ಯಕ್ಷೆ ಮಲ್ಲಿಕಾ ಜೆ. ರೈ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗಿರುವ ವಿಪುಲ ಉದ್ಯೋಗಾವಕಾಶಗಳನ್ನು ತಿಳಿಸಿದರು.

ಮಹಿಮಾ ಮತ್ತು ತಂಡದವರು ಪ್ರಾರ್ಥನೆ ಸಲ್ಲಿಸಿದರು. ಮ್ರಾನ್ ತಾಜ್ ಸ್ವಾಗತಿಸಿದರು. ತನ್ವಿರ್ ಪಿಂಟೋ ವಂದಿಸಿದರು. ಫಾಹಿಮಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net