ನಗರಸಭೆಯ ಕಟ್ಟಡವನ್ನು ನವೀಕರಿಸಿ ನೂತನ ಶಾಸಕರ ಕಚೇರಿ ಉದ್ಘಾಟನೆ

PTR_28 AUG_4
Published on

ಪುತ್ತೂರು: ತಾಲೂಕು ಆಡಳಿತ ಸೌಧದ ಪಕ್ಕದಲ್ಲಿರುವ ನಗರಸಭೆಯ ಕಟ್ಟಡವನ್ನು ನವೀಕರಿಸಿ ನೂತನ ಶಾಸಕರ ಕಚೇರಿಯನ್ನು ಸೋಮವಾರ ಶಾಸಕ ಅಶೋಕ್ ಕುಮಾರ್ ರೈ ದಂಪತಿಗಳು ಉದ್ಘಾಟಿಸಿದರು.

ಪುರೋಹಿತರ ನೇತೃತ್ವದಲ್ಲಿ ಗಣಪತಿ ಹವನ ಸೇರಿ ಧಾರ್ಮಿಕ ಕಾರ್ಯಕ್ರಮಗಳು ನಡೆಸಿ ನೂತನ ಕಚೇರಿಯ ಆಸನದಲ್ಲಿ ಶಾಸಕರು ಆಸೀನರಾದರು. ಧರ್ಮಪತ್ನಿ ಸುಮಾ ಅಶೋಕ್ ರೈ ಮತ್ತು ಕುಟುಂಬ ಸದಸ್ಯರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನೂತನ ಶಾಸಕರ ಕಚೇರಿ ಆವರಣದಲ್ಲಿ ನಡೆದ ಫಲಾನುಭವಿಗಳ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಅವರು ಕ್ಷೇತ್ರ ವ್ಯಾಪ್ತಿಯ ೧೫೦ ಮಂದಿ ಫಲಾನುಭವಿಗಳಿಗೆ ೯೪ಸಿ ಮತ್ತು ೯೪ಸಿಸಿ ಹಕ್ಕುಪತ್ರ ವಿತರಣೆಯನ್ನು ಮಾಡಲಾಯಿತು.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ. ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ಕೆ.ಬಿ. ರಾಜಾರಾಂ, ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಗಿರೀಶ್ ನಂದನ್, ತಹಸೀಲ್ದಾರ ಶಿವಶಂಕರ್ ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net