

ಪ್ರಮುಖ ಮುಖ್ಯಾಂಶಗಳು
ಪುತ್ತೂರು:ಮಳೆಗಾಲದಲ್ಲಿ ಅನಾಹುತಗಳುಸಂಭವಿಸಿದಾಗ ಸಾರ್ಜನಿಕರ ಸಮಸ್ಯೆಗೆ ಸ್ಪಂದಿಸಲು ಎಲ್ಲ ಇಲಾಖೆಗಳು ಸನ್ನದ್ಧವಾಗಿರಬೇಕು. ಮಳೆಯಿಂದ ಹೆಚ್ಚಾಗಿ ಬಡವರ ಮನೆಗಳಿಗೆ ಹಾನಿಯಾಗುತ್ತದೆ. ಇಂಥ ಸಂದರ್ಭದಲ್ಲಿ ವಿನಾ ಕಾರಣ ವಿಳಂಬ ಮಾಡದೆ ತಕ್ಷಣವೇ ಸಂಬಂಧಪಟ್ಟ ಇಲಾಖೆ ಪರಿಹಾರ ಒದಗಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾಗಬೇಕು. ಇಲ್ಲದಿದ್ದರೆ ಟೆಂಡರ್ ಆಗುವಾಗ ಗುಂಡಿಗಳು ಕೆರೆಯಾಗಿ ಪರಿವರ್ತನೆಯಾಗಿರುತ್ತವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಸೂಚಿಸಿದರು.
ಪುತ್ತೂರುತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬಂಟ್ವಾಳ ಹಾಗೂ ಪುತ್ತೂರು ತಾಲೂಕುಮಟ್ಟದ ಪ್ರಕೃತಿ ವಿಕೋಪ ಮುನ್ನೆಚ್ಚರಿಕೆ ಪೂರ್ವಭಾವಿಸಭೆಯನ್ನುದ್ದೇಶಿಸಿ ಮಾತನಾಡಿದರು.
ಗಾಳಿಗೆತುಂಡಾಗಿ ಅಡಿಕೆ ಮರಗಳು ಬಿದ್ದ ಬಗ್ಗೆ ದೂರು ಬರುತ್ತಿದ್ದು ಪರಿಹಾರ ಕಲ್ಪಿಸಬೇಕು. ರಸ್ತೆಗಳಿಗೆ ಬ್ಯಾರಿಕೇಡ್ಗಳನ್ನು ಹಾಕುವಾಗರಿ-ಕ್ಟರ್ ಸ್ಟಿಕರ್ಗಳನ್ನು ಕಡ್ಡಾಯವಾಗಿಹಾಕಬೇಕು. ಸ್ಟಿಕರ್ ಇಲ್ಲದೆ ಅಪಘಾತಗಳಿಗೆ ಕಾರಣವಾಗುತ್ತಿದೆ. ರಿಪ್ಲೆಕ್ಟರ್ ಅಳವಡಿಕೆಗೆ ದಾನಿಗಳ ಮೂಲಕ ಆರ್ಥಿಕ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.
ತೋಟಗಾರಿಕೆಇಲಾಖೆ ಅಧಿಕಾರಿಗಳು ಮಾತನಾಡಿ, ಅಡಕೆ ಮರಗಳು ಬಿದ್ದ ಪ್ರಕರಣದಲ್ಲಿ ಮಾಲೀಕರ ಜಾಗದ ಶೇ.೩೩ರಷ್ಟು ಹಾನಿಯಾದಾಗಪರಿಹಾರ ನೀಡಲು ಮಾತ್ರವೇ ಅವಕಾಶವಿದೆ. ಮಾರ್ಗಸೂಚಿಯ ಪ್ರಕಾರ ೨.೫ ಸಾವಿರರೂ. ನೀಡುವುದಕ್ಕೆ ಅವಕಾಶವಿದೆ. ಗಿಡಗಳ ಸಂಖ್ಯೆಯನ್ನು ಆಧರಿಸಿ ಪರಿಹಾರ ನೀಡುತ್ತಿಲ್ಲ ಎಂದರು.
ಎನ್ಡಿಆರ್ಎ- ತಂಡ ಸನ್ನದ್ಧ:ಎನ್ಡಿಆರ್ಎಫ್ ಸಿಬ್ಬಂದಿ ಮಾತನಾಡಿ, ಮಾನವನಿರ್ಮಿತ ಅಥವಾ ಪ್ರಕೃತಿ ವಿಕೋಪ ಸಂಭವಿಸಿದಾಗ ಕ್ಷಿಪ್ರ ಕಾರ್ಯಾಚರಣೆಗೆ ನಮ್ಮ ತಂಡ ಸನ್ನದ್ಧವಾಗಿದೆ. ವಾಹನ ಸಹಿತ ಅಗತ್ಯ ಪರಿಕರಗಳು ಇದ್ದು, ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಣೆಯ ತಂಡಗಳಿಗೂ ಸಹಕಾರ ನೀಡಲಿದ್ದೇವೆ. ಸಂಘ ಸಂಸ್ಥೆ ಸೇರಿ ವಿವಿಧ ಸ್ಥಳಗಳಲ್ಲಿ ತರಬೇತಿಯನ್ನು ನೀಡುತ್ತಿದ್ದೇವೆ ಎಂದರು.
ಮೆಸ್ಕಾಂನಲ್ಲಿಗ್ರಾಮೀಣ ಭಾಗದಲ್ಲಿ ರಾತ್ರಿ ಪಾಳಿಯಲ್ಲಿ ಸಿಬ್ಬಂದಿ ಇರುವುದಿಲ್ಲ. ಶಾಲೆಗಳ ಪೈಕಿ ೩೪ ಕಟ್ಟಡಗಳ ಛಾವಣಿ,ಗೋಡೆಗಳು ಬಿರುಕು ಬಿಟ್ಟಿದ್ದು, ದುರಸ್ತಿ ಕಾರ್ಯ ನಡೆಯಬೇಕಿದೆ. ರಬ್ಬರ್ ಬೆಳೆ ಇರುವಲ್ಲಿ ಡೆಂಘೆ ಪ್ರಕರಣ ಹೆಚ್ಚಿದೆ. ಉಪ್ಪಿನಂಗಡಿ ಹಾಗೂ ಶಾಂತಿಗೋಡು ಭಾಗದಲ್ಲಿ ಹೆಚ್ಚಿನ ಪ್ರಕರಣಗಳಿದ್ದು ಜಾಗೃತಿ ಮೂಡಿಸಲಾಗುತ್ತಿದೆ. ಭಾರಿ ಕುಸಿತ ಸಂಭವಿಸುವ ಸ್ಥಳಗಳನ್ನು ಗುರುತು ಮಾಡಲಾಗಿದ್ದು ಆ ವ್ಯಾಪ್ತಿಯ ಗ್ರಾಪಂಗಳಿಗೆತುರ್ತು ಅನುದಾನದ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಸಹಾಯಕಆಯುಕ್ತೆ ಸ್ಟೆಲ್ಲಾ ವರ್ಗೀಸ್, ಪುತ್ತೂರು ತಹಸೀಲ್ದಾರ್ ಬಿ.ಎಸ್.ಕೂಡಲಗಿ,ಬಂಟ್ವಾಳ ತಹಸೀಲ್ದಾರ್ ಮಂಜುನಾಥ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಸಚಿನ್ ಕುಮಾರ್, ನವೀನ್ ಭಂಡಾರಿ, ಪೌರಾಯುಕ್ತೆ ವಿದ್ಯಾ ಕಾಳೆ ಉಪಸ್ಥಿತರಿದ್ದರು.
ಪ್ರಕೃತಿವಿಕೋಪ ಮುನ್ನೆಚ್ಚರಿಕೆ ಪೂರ್ವಭಾವಿ ಸಭೆಗೆ ಪುತ್ತೂರು ಮೆಸ್ಕಾಂ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಗೈರಾಗಿದ್ದರು. ಬಂಟ್ವಾಳ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಶಾಸಕರು ಸೂಚನೆಗಳನ್ನು ನೀಡುತ್ತಿದ್ದ ವೇಳೆ ತೂಕಡಿಸುತ್ತಿದ್ದುದು ಕಂಡುಬಂತು.
ಪುತ್ತೂರುಮೆಸ್ಕಾಂ ಅಧಿಕಾರಿಗಳು ಸಭೆ ಬಾರದ ವಿಚಾರದಲ್ಲಿ ಶೋಕಾಸ್ ನೋಟಿಸ್ ನೀಡುವಂತೆ ಶಾಸಕರು ಸೂಚಿಸಿದರು. ವಿಚಾರ ತಿಳಿಯುತ್ತಿದ್ದಂತೆ ಕಾರ್ಯನಿರ್ವಹಣಾ ಇಂಜಿನಿಯರ್ ಸಭೆಗೆ ಹಾಜರಾದರು. ಸಮಸ್ಯೆಗಳನ್ನು ತಿಳಿಸಲು ಜನರುಕರೆ ಮಾಡಿದಾಗ ಸ್ವೀಕರಿಸದಿರುವುದು, ತ್ವರಿತ ಸ್ಪಂದನೆ ನೀಡದಿರುವುದು, ಸಿಬ್ಬಂದಿ ಇಲ್ಲ ಎಂಬ ಕಾರಣ ನೀಡುವುದು ಮುಂದೆ ಕಂಡು ಬರಬಾರದು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಶಾಸಕರು ಖಡಕ್ ಸೂಚನೆ ನೀಡಿದರು.