ಪುತ್ತೂರಲ್ಲಿ ಕೋಳಿ ಮರಿ ವಿತರಣೆ

PTR_22 SEP_3
Published on

ಪುತ್ತೂರು: ನಾಟಿ ಕೋಳಿಗೆ ಉತ್ತಮ ಬೇಡಿಕೆ ಇದ್ದು, ಮಹಿಳೆಯರು ಮನೆಯಲ್ಲಿ ನಾಟಿ ಕೋಳಿಗಳನ್ನು ಸಾಕುವ ಮೂಲಕ ಸ್ವ ಉದ್ಯೋಗ ಮಾಡಬಹುದು. ಈ ಮೂಲಕ ಉತ್ತಮ ಲಾಭ ಗಳಿಸಬಹುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪಶು ಸಂಗೋಪನಾ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಅರ್ಹ ಮಹಿಳೆಯರಿಗೆ ೫ ವಾರದ ಕೋಳಿ ಮರಿಗಳನ್ನು ವಿತರಿಸಿ ಮಾತನಾಡಿದರು.

ಪರಿಶಿಷ್ಟ ಪಂಗಡದ ೪೦, ಸಾಮಾನ್ಯ ೪, ಪರಿಶಿಷ್ಟ ಜಾತಿಯ ೨ ಕುಟುಂಬ ಸೇರಿ ಒಟ್ಟು ೪೬ ಮಂದಿಗೆ ಮರಿಗಳನ್ನು ವಿತರಿಸಲಾಯಿತು. ತಾಲೂಕು ಪಶು ವೈದ್ಯಾಧಿಕಾರಿ ಡಾ.ಧರ್ಮಪಾಲ ಸರ್ಕಾರದಿಂದ ಸಿಗುವ ಇತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net