ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ತಿಂಗಳಿದ್ದ ಬಾಕಿಯಿದ್ದ ವೇತನದ ವಿಚಾರ ಶಾಸಕ ಅಶೋಕ್ ಕುಮಾರ್ ರೈ ಗಮನಕ್ಕೆ ಬರುತ್ತಿದ್ದಂತೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಕರೆ ಮಾಡಿದ ಅ.೧೭ರಂದು ವೇತನ ನೀಡಲೇಬೇಕು ಎಂದು ಸೂಚನೆಯನ್ನು ನೀಡಿದ್ದು, ಅದರಂತೆ ಗುರುವಾರ ಖಾತೆಗೆ ಜಮೆಯಾಗಲಿದೆ.
ಇಲಾಖೆಯ ಆಯುಕ್ತರ ಜತೆ ಮಾತನಾಡಿದ ಶಾಸಕರು ಯಾಕೆ ಎರಡು ತಿಂಗಳಿಂದ ವೇತನವನ್ನು ಬಾಕಿ ಇರಿಸಲಾಗಿದೆ. ಯಾವುದೇ ಕಾರಣಕ್ಕೂ ವೇತನ ವಿಳಂಬವಾಗಬಾರದು. ನಾಳೆ (ಗುರುವಾರ) ವೇತನವನ್ನು ಅಂಗನವಾಡಿ ಕಾರ್ಯಕರ್ತೆಯವರ ಖಾತೆಗೆ ಜಮೆಯಾಗಬೇಕು ಎಂದು ಸೂಚನೆ ನೀಡಿದ್ದು, ಇದಕ್ಕೆ ಆಯುಕ್ತರು ಒಪ್ಪಿಗೆಯನ್ನು ಸೂಚಿಸಿದ್ದಾರೆ.
ಅಂಗನವಾಡಿಗಳಿಗೆ ಮೊಟ್ಟೆ ಮತ್ತು ಅಡುಗೆ ಅನಿಲವನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡಬೇಕಾಗಿದೆ. ಕಳೆದ ಕೆಲವು ತಿಂಗಳಿಂದ ಮೊಟ್ಟೆ ಮತ್ತು ಅಡುಗೆ ಅನಿಲದ ಹಣವನ್ನು ಕೇಂದ್ರ ಸರ್ಕಾರ ನೀಡದ ಕಾರಣ ಕೆಲವು ಅಂಗನವಾಡಿಗಳಿಗೆ ಮೊಟ್ಟೆ ಮತ್ತು ಗ್ಯಾಸ್ ಕೊರತೆ ಎದುರಾಗಿದೆ. ಇದನ್ನು ಮನಗಂಡ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಿದ್ದು, ಎರಡು ದಿನದೊಳಗೆ ಮೊಟ್ಟೆ ಮತ್ತು ಅನಿಲದ ಹಣವೂ ಖಾತೆಗೆ ಜಮೆಯಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಮೊಟ್ಟೆ ಮತ್ತು ಗ್ಯಾಸ್ ಹಣ ಬಂದಿಲ್ಲ ಎಂದು ಕೆಲವು ಅಂಗನವಾಡಿಗಳನ್ನು ಬಂದ್ ಮಾಡಲಗಿದೆ ಎಂಬ ವಿಚಾರವನ್ನು ಕೆಲವರು ಶಾಸಕರ ಗಮನಕ್ಕೆ ತಂದಿದ್ದು, ಈ ಕಾರಣಕ್ಕಾಗಿ ಅಂಗನವಾಡಿ ಕೇಂದ್ರವನ್ನು ಬಂದ್ ಮಾಡಿದ್ದಲ್ಲಿ ಕಾನೂನು ಕ್ರಮಕೈಗೊಳ್ಳುವಂತೆ ಅಽಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಮೊಟ್ಟೆ ಮತ್ತು ಗ್ಯಾಸ್ ಹಣ ಕೇಂದ್ರ ಸರ್ಕಾರ ನೀಡಬೇಕಿತ್ತು ಯಾವ ಕಾರಣಕ್ಕೆ ನೀಡಿಲ್ಲ ಎಂಬುದು ಗೊತ್ತಾಗಲಿಲ್ಲ. ಮೊಟ್ಟೆ ಬಂದಿಲ್ಲ ಎಂದು ಅಂಗನವಾಡಿಯನ್ನು ಬಂದ್ ಮಾಡುವುದು ಅಕ್ಷಮ್ಯ ಎಂದು ಶಾಸಕರು ತಿಳಿಸಿದರು.