ಕೊಂಬೆಟ್ಟಿನ 16 ಸೆಂಟ್ಸ್‌ ಜಾಗ ದೇವಳಕ್ಕೆ ಮರುಸ್ವಾಧೀನ PUTTUR

ಕೊಂಬೆಟ್ಟಿನಲ್ಲಿರುವ ದೇವಳದ ಜಾಗದಲ್ಲಿ ಅಳವಡಿಸಲಾದ ಫಲಕವನ್ನು ಶಾಸಕ ಅಶೋಕ್‌ ಕುಮಾರ್‌ ರೈ ಅನಾವರಣಗೊಳಿಸಿದರು.
ಕೊಂಬೆಟ್ಟಿನಲ್ಲಿರುವ ದೇವಳದ ಜಾಗದಲ್ಲಿ ಅಳವಡಿಸಲಾದ ಫಲಕವನ್ನು ಶಾಸಕ ಅಶೋಕ್‌ ಕುಮಾರ್‌ ರೈ ಅನಾವರಣಗೊಳಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಫಲಕ ಅನಾವರಣಗೊಳಿಸಿದ ಶಾಸಕ ಅಶೋಕ್‌ ರೈ
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒತ್ತುವರಿಯಾದ ಜಾಗ ಸ್ವಾಧೀನ ಪ್ರಕ್ರಿಯೆ ಮುಂದುವರಿದಿದ್ದು, ಕೊಂಬೆಟ್ಟಿನಲ್ಲಿ ದೇವಳದ ಹೆಸರಿನಲ್ಲಿರುವ 16 ಸೆಂಟ್ಸ್‌ ಜಾಗವನ್ನು ಗುರುತಿಸಿ ಸ್ವಾಧೀನಕ್ಕೆ ಪಡೆಯಲಾಯಿತು.
ಶಾಸಕ ಅಶೋಕ್‌ ಕುಮಾರ್‌ ರೈ ಕೊಂಬೆಟ್ಟಿನಲ್ಲಿರುವ ದೇವಳದ ಜಾಗದ ವೀಕ್ಷಿಸಿ ದೇವಳದ ವತಿಯಿಂದ ಅಳವಡಿಸಲಾದ ಫಲಕವನ್ನು ಅನಾವರಣಗೊಳಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್‌ ಪಂಜಿಗುಡ್ಡೆ, ಸದಸ್ಯ ಈಶ್ವರ ಬೆಡೇಕರ್‌, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್‌ ಶೆಟ್ಟಿ, ಲೋಕೇಶ್‌ ಪಡ್ಡಾಯೂರು, ರೋಹನ್‌ರಾಜ್‌, ನಡುಬೈಲುಗುತ್ತು ಗೋಪಾಲ ಪೂಜಾರಿ, ದೇವಸ್ಥಾನದ ಸಿಬ್ಬಂದಿ, ಸ್ಥಳೀಯರು ಉಪಸ್ಥಿತರಿದ್ದರು.
"

ಮಹಾಲಿಂಗೇಶ್ವರ ದೇವಸ್ಥಾನದ ಹೆಸರಿನಲ್ಲಿರುವ ಎಲ್ಲ ಆರ್‌ಟಿಸಿ ಪರಿಶೀಲನೆ ವೇಳೆ ದೇವಳದ ಪಕ್ಕದಲ್ಲಿ 16 ಸೆಂಟ್ಸ್‌ ಜಾಗ ಇರುವುದು ಗಮನಕ್ಕೆ ಬಂದಿತ್ತು. ಇದನ್ನು ಎರಡು ಮೂರು ಸಲ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸರ್ವೇ ಮಾಡಿಸಿದಾಗ ಅದು ದೇವಸ್ಥಾನದ್ದೂ ಎಂದು ಖಚಿತಪಡಿಸಿಕೊಂಡು ಅದನ್ನು ವಶಕ್ಕೆ ಪಡೆಯುವ ಕೆಲಸ ಮಾಡಿದ್ದೇವೆ. ಮುಖ್ಯರಸ್ತೆಯಲ್ಲಿ ಸುಮಾರು 45 ಸೆಂಟ್ಸ್‌ ಜಾಗ ದೇವಳದ ಹೆಸರಿನಲ್ಲಿ ಆರ್‌ಟಿಸಿ ಇದ್ದು, ಜಾಗವನ್ನು ಪರಿಶೀಲನೆ ಮಾಡಿದ್ದೇವೆ.

— ಅಶೋಕ್‌ ಕುಮಾರ್‌ ರೈ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net