

ಪುತ್ತೂರು: ಸ್ವಚ್ಚತೆ ಮತ್ತು ಸಾರ್ವಜನಿಕರ ದಿನ ನಿತ್ಯದ ಸಮಸ್ಯೆಗೆ ಸ್ಪಂಧನೆ ಕೊಡುವವರು ನಮ್ಮ ಪೌರರ್ಮಿಕರು. ಇಂತಹ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ವಸತಿ ಯೋಜನೆ ಕುರಿತು ನಗರಸಭೆ ಸ್ಪಂಧನೆ ನೀಡಿದೆ. ಈಗಾಗಲೇ ರೂ. 1 ಕೋಟಿ ವೆಚ್ಚದಲ್ಲಿ ಕರ್ಕುಂಜದಲ್ಲಿ ನಿವೇಶನ ಕಾದಿರಿಸಿದ್ದು, ಮುಂದೆ 6 ತಿಂಗಳ ಒಳಗಾಗಿ ಟೆಂಡರ್ ಪ್ರಕ್ರಿಯೆ ನಡೆದು ವಸತಿ ಯೋಜನೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಹೇಳಿದರು.
ಪುತ್ತೂರು ನಗರಸಭೆಯ ವತಿಯಿಂದ ಪುರಭವನದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.
ಮುಂದಿನ ದಿನ ಪೌರಕಾರ್ಮಿಕರ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ಬಜೆಟ್‌ನಲ್ಲಿ ರೂ. 5 ಲಕ್ಷವನ್ನು ಇಡಲು ತಿರ್ಮಾಣ ಮಾಡಲಾಗಿದೆ ಎಂದರು.
ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ ಅವರು ಮಾತನಾಡಿ, ಸ್ವಚ್ಛತೆಯಲ್ಲಿ ನಗರಸಭೆ 1ನೇ ಸ್ಥಾನಕ್ಕೆ ಬರಲು ಪಣತೊಡಬೇಕು:
ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಅವರು ಮಾತನಾಡಿ ಎರಡು ಮೂರು ವರ್ಷಗಳ ಹೋರಾಟದ ಫಲವಾಗಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸರಕಾರದಲ್ಲಿ ಪೌರ ಕಾರ್ಮಿಕರಿಗೆ ಶುಭ ಸಂದೇಶ ಸಿಕ್ಕಿದೆ. ಇವತ್ತು ಪೌರ ಕಾರ್ಮಿಕರ ದಿನಾಚರಣೆ ನಮ್ಮಲ್ಲಿ ಸಂಭ್ರಮದಿಂದ ಆಚರಣೆ ಮಾಡಿದಂತೆ ಮುಂದಿನ ಭಾರಿ ನಗರಸಭೆ ಸ್ವಚ್ಛತೆಯಲ್ಲಿ 1ನೇ ಸ್ಥಾನ ಬರಬೇಕೆಂದು ಪಣತೊಡಬೇಕೆಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಹಿರಿಯ ಪೌರಕಾರ್ಮಿಕ ದಯಾನಂದ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾಕಿರಣ್, ವರಲಕ್ಷ್ಮಿ , ನಿವೃತ್ತ ಹಿರಿಯ ಪೌರಕಾರ್ಮಿಕ ರಾಜು ಉಪಸ್ಥಿತರಿದ್ದರು.
ಪುತ್ತೂರು ನಗರಸಭೆಯ ವತಿಯಿಂದ ಹಿರಿಯ ಪೌರಕಾರ್ಮಿಕರನ್ನು ಗೌರವಿಸಲಾಯಿತು.
ನಗರಸಭೆ ವಾಣಿ ಪ್ರಾರ್ಥಿಸಿದರು. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಾಗತಿಸಿದರು. ಚಾಲಕ ರಾಧಾಕೃಷ್ಣ ವಂದಿಸಿದರು.