ದರ್ಬೆ ಸಮೀಪದ ಸಚಿನ್ ಟ್ರೇಡರ್ಸ್ ದಿನಸಿ ಅಂಗಡಿಯಿಂದ ನಗದು ಕಳವು

123
Published on

ಪುತ್ತೂರು: ದರ್ಬೆ ಸಮೀಪದ ಸಚಿನ್ ಟ್ರೇಡರ್ಸ್ ದಿನಸಿ ಅಂಗಡಿಯಿಂದ ಲಕ್ಷಾಂತರ ರೂಪಾಯಿ ನಗದು ಕಳವಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದು, ಕಳ್ಳತನ ಮಾಡಿದಾತನ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಸಚಿನ್ ಟ್ರೇಡನ ಮಾಲಕಿ ವಿದ್ಯಾ ನಾಯಕ್ ಮತ್ತು ಅವರ ಗಂಡ ಮಂಜುನಾಥ್ ನಾಯಕ್ ಅವರು ಅಂಗಡಿಯ ವ್ಯವಹಾರ ನೋಡಿಕೊಳ್ಳುತ್ತಿದ್ದು, ಸೆ.೪ರಂದು ಮಂಜುನಾಥ್ ನಾಯಕ್ ಅವರು ಲೆಕ್ಕ ಮಾಡಿಟ್ಟ ರೂ.೨.೨೫ಲಕ್ಷ ನಗದನ್ನು ಡ್ರಾಯರ್ ಪಕ್ಕದಲ್ಲಿ ಇಟ್ಟಿದ್ದು, ಎರಡು ದಿನಗಳ ಬಳಿಕ ಹಣ ನಾಪತ್ತೆಯಾಗಿತ್ತು.

ಹಣ ನಾಪತ್ತೆಯನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಅಂಗಡಿಯ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಸೆ.೪ ರಾತ್ರಿ ಸಮಯ ಒಬ್ಬ ವ್ಯಕ್ತಿ ಅಂಗಡಿಯ ಹಿಂಬದಿಯ ಕ್ಯಾಂಟೀನ್ ಗೋಡೆಗೆ ಹತ್ತಿ ವೆಂಟಿಲೇಟರ್ ಮೂಲಕ ಒಳಪ್ರವೇಶಿಸಿ ಅಂಗಡಿಯ ಒಳಗೆ ಬಂದು ಅಂಗಡಿಯ ಡ್ರಾಯರ್ ಪಕ್ಕದಲ್ಲಿದ್ದ ಹಣದ ಕಟ್ಟನ್ನು ಕದ್ದು ಹೋಗುತ್ತಿರುವುದು ಕಂಡಿರುವುದಾಗಿ ಸೆ.೭ರಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net