ಲಂಚ ಆರೋಪ ಹಿನ್ನಲೆ, ಸಿಬ್ಬಂದಿಯಿಂದ ಮರಣೋತ್ತರ ಪರೀಕ್ಷೆ ನಡೆಸದೆ ಪ್ರತಿಭಟನೆ!

WhatsApp Image 2023-06-17 at 12.40.31
Published on

ಪುತ್ತೂರು: ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸಿಬ್ಬಂದಿಗಳು ಲಂಚ ಪಡೆಯುವ ಆರೋಪದ ಹಿನ್ನಲೆಯಲ್ಲಿ ಶನಿವಾರ ಶವಗಳ ಮರಣೋತ್ತರ ಪರೀಕ್ಷೆಯನ್ನು ನಡೆಸದೆ ಪ್ರತಿಭಟಿಸಿದ್ದಾರೆ.

ಸ್ಥಳಕ್ಕೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ದೀಪಕ್ ರೈ ಅವರು ಬೇಟಿ ಮಾಡಿ ಮರಣೋತ್ತರ ಪರೀಕ್ಷೆಯನ್ನು ನಡೆಸುವ ಗುತ್ತಿಗೆ ನೌಕರರಲ್ಲಿ ಮಾತುಕತೆಯನ್ನು ನಡೆಸಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವೊಲಿಸುವ ಕಾರ್ಯವನ್ನು ಮಾಡಿದರು. ಆ ಬಳಿಕ ಬೆಳ್ಳಾರೆ ಹಾಗೂ ಉಪ್ಪಿನಂಗಡಿ ಭಾಗದಿಂದ ಬಂದಿದ್ದ ಶವಗಳ ಮರಣೋತ್ತರ ಪರೀಕ್ಷೆಗೆ ಮುಂದಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net