ಅಪಾಯಕಾರಿ ಶಿಥಿಲ ಕಟ್ಟಡ ತೆರವು PUTTUR

ಪುತ್ತೂರು ಮುಖ್ಯ ರಸ್ತೆಯ ಬದಿಯಲ್ಲಿದ್ದ ಶಿಥಿಲ ಕಟ್ಟಡವನ್ನು ತೆರವು ಮಾಡುತ್ತಿರುವುದು.
ಪುತ್ತೂರು ಮುಖ್ಯ ರಸ್ತೆಯ ಬದಿಯಲ್ಲಿದ್ದ ಶಿಥಿಲ ಕಟ್ಟಡವನ್ನು ತೆರವು ಮಾಡುತ್ತಿರುವುದು.
Published on
ಪುತ್ತೂರು: ಮಹಿಳಾ ಠಾಣೆಯ ಮುಂಭಾಗದಲ್ಲಿ ಕೇದಗೆ ಕುಟುಂಬಕ್ಕೆ ಸೇರಿದ ಹಳೆಯ ಕಟ್ಟಡ ಅಪಾಯಕಾರಿಯಾಗಿದ್ದ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪದ ಕಾರಣ ನೀಡಿ ಶುಕ್ರವಾರ ನಗರಸಭೆಯಿಂದ ಸಂಪೂರ್ಣವಾಗಿ ಕಟ್ಟಡ ತೆರವು ಮಾಡಲಾಯಿತು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಆಗಮಿಸುವ ಹಳೆಯ ಕಟ್ಟಡದ ಒಂದು ಭಾಗವನ್ನು ಸೂಟೆ ಹಿಡಿದು ಬರಲು ಸಮಸ್ಯೆಯಾಗುತ್ತದೆ ಎಂಬ ಕಾರಣವನ್ನು ನೀಡಿ ದೇವಸ್ಥಾನದ ಜಾತ್ರೋತ್ಸವ ಸಮಯದಲ್ಲಿ ತೆರವು ಮಾಡಲಾಗಿತ್ತು. ಇದರಿಂದ ಕಟ್ಟಡದ ಒಂದು ಭಾಗಕ್ಕೆ ಹಾನಿಯಾಗಿ ಅಪಾಯವನ್ನು ಆಹ್ವಾನಿಸುವಂತಿತ್ತು. ಮಳೆ ಪ್ರಾರಂಭವಾದ ಬಳಿಕ ಕಟ್ಟಡದ ಮೇಲ್ಭಾಗ ವಾಲುವುದಕ್ಕೆ ಪ್ರಾರಂಭವಾಗಿತ್ತು.
ಕಟ್ಟಡದಲ್ಲಿ ಅಂಗಡಿ ವ್ಯಾಪಾರ ನಡೆಸುತ್ತಿದ್ದವರಿಗೆ ನಗರಸಭೆ ನೋಟಿಸ್ ಜಾರಿಗೊಳಿಸಿ ಅಂಗಡಿಗಳನ್ನು ತೆರವು ಮಾಡುವಂತೆ ಸೂಚಿಸಿತ್ತು. ಅದರಂತೆ ಅಂಗಡಿಗಳನ್ನು ಸ್ಥಳಾಂತರಿಸಲಾಗಿತ್ತು. ಜೂ.೮ರಂದು ಕಟ್ಟಡದ ಒಂದು ಭಾಗ ಕುಸಿದಿದ್ದು, ಮುಖ್ಯ ರಸ್ತೆಯ ಅಂಚಿನಲ್ಲಿದ್ದ ಕಾರಣ ಅಪಾಯ ಜಾಗದ ಮಾಲೀಕರಿಗೆ ನೋಟಿಸ್ ನೀಡಿ ನಗರಸಭೆ ಕಾರ್ಯಾಚರಣೆ ನಡೆಸಿತು. ಸಂಚಾರ ಠಾಣೆ ಪೊಲೀಸರು, ಮೆಸ್ಕಾಂ ಇಲಾಖೆ ಸಿಬ್ಬಂದಿ ಸಹಕಾರ ನೀಡಿದರು.

ಕೋರ್ಟ್‌ನಿಂದ ತಡೆಯಾಜ್ಞೆ:

ಕೇದಗೆ ಕುಟುಂಬಕ್ಕೆ ಸೇರಿದ ಜಾಗದಲ್ಲಿನ ಕಟ್ಟಡ ಹಳೆಯದಾಗಿದ್ದು, ತೆರವು ಮಾಡುವುದಕ್ಕೆ ಮಾಲೀಕರು ಮುಂದಾದ ಸಂದರ್ಭದಲ್ಲಿ ಅಂಗಡಿ ಮಾಲೀಕರು ನ್ಯಾಯಲಯದ ಮೊರೆ ಹೋಗಿ ತೆರವಿಗೆ ತಡೆಯಾಜ್ಞೆ ತಂದಿದ್ದರು. ಇದರಿಂದ ಹಳೆಯ ಕಟ್ಟಡ ಹಾಗೇ ಉಳಿದುಕೊಂಡಿತ್ತು. ಈಗ ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಸಮಸ್ಯೆಯಿರುವ ಕಾರಣ ನಗರಸಭೆಯ ಮೂಲಕ ತೆರವು ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗಿದೆ.
"

ಕೇದಗೆ ಕುಟುಂಬಕ್ಕೆ ಸೇರಿದ ಜಾಗದ ಉಸ್ತುವಾರಿ ನನ್ನದಾಗಿದೆ. ಜಾತ್ರೆ ವೇಳೆಯಲ್ಲಿ ಶಾಸಕರು ಹಾಗೂ ದೇವಸ್ಥಾನ ಸಮಿತಿ ವತಿಯಯಿಂದ ಕಟ್ಟಡವನ್ನು ಭಾಗಶಃ ಕೆಡವಲಾಗಿತ್ತು. ಮಳೆಗಾಲದಲ್ಲಿ ಕಟ್ಟಡದ ಇತರ ಭಾಗಗಳು ಕುಸಿಯುತ್ತಿತ್ತು. ನಗರಸಭೆ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಕಟ್ಟಡ ತೆರವು ಮಾಡುತ್ತಿದ್ದಾರೆ. ನ್ಯಾಯಾಲಯದ ಅ?ಕಾರಿಯಾಗಿ ನಗರಸಭೆಗೆ ಸಹಕಾರ ನೀಡುತ್ತಿದ್ದೇನೆ. ೧೦೦ ವರ್ಷದ ಕಟ್ಟಡ ಇತಿಹಾಸದ ಪುಟ ಸೇರುವಾಗ ಬೇಸರವಾಗುತ್ತಿದೆ.

— ಡಾ.ಅರವಿಂದ ರಾವ್ ಕೇದಿಗೆ, ರಿಸೀವರ್, ಬಂಟ್ವಾಳ ನ್ಯಾಯಲಯ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net