ಪುತ್ತೂರು ಮೂಲದ ವ್ಯಕ್ತಿ ಹೃದಯಾಘತದಿಂದ ರಿಯಾದ್ ನಲ್ಲಿ ನಿಧನ

PTR_15 JUNE_1
Published on

ಪುತ್ತೂರು: ಚಿಕ್ಕಪುತ್ತೂರು ರೈಲ್ವೇ ಸ್ವೇಷನ್ ಸಮೀಪದ ನಿವಾಸಿ ಎಲ್. ಟಿ. ಮಹಮ್ಮದ್ ಯಾನೆ ಬಾವು (50) ಹೃದಯಾಘಾತದಿಂದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಗುರುವಾರ ನಿಧನರಾಗಿದ್ದಾರೆ. ಅವರು ರಿಯಾದ್ ನಲ್ಲಿ ಹಲವು ವರ್ಷಗಳಿಂದ ಉದ್ಯೋಗಿಯಾಗ ನಡೆಸಿಕೊಂಡಿದ್ದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮೃತ ದೇಹವನ್ನು ಸ್ವದೇಶಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಪ್ರಯತ್ನಗಳು ನಡೆಯುತ್ತಿದ್ದು, ಕಾನೂನು ನಿಯಮಾವಳಿಗಳನ್ನು ಪೂರೈಸಿ ತರಬೇಕಾದ ಅನಿವಾರ್ಯತೆ ಇರುವುದರಿಂದ ಏಳು ದಿನಗಳು ಬೇಕಾಗಬಹುದೆಂದು ಕುಟುಂಬದ ಆಪ್ತ ಮೂಲಗಳು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net